Numbers 13:22 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅವರು ನೆಗೆವ್ ಮೂಲಕ ದೇಶವನ್ನು ಪ್ರವೇಶಿಸಿ ಹೆಬ್ರೋನಿಗೆ ಹೋದರು. ಹೆಬ್ರೋನ್ ಪಟ್ಟಣವು ಈಜಿಪ್ಟ್ ದೇಶದಲ್ಲಿರುವ ಚೋವನ್ ಪಟ್ಟಣಕ್ಕಿಂತ ಏಳು ವರ್ಷಗಳ ಮುಂಚೆ ಕಟ್ಟಲ್ಪಟ್ಟಿತ್ತು. ಅಲ್ಲಿ ಅಹೀಮನ್, ಶೇಫೈ ಮತ್ತು ತಲ್ಮೈ ಎಂಬವರು ವಾಸಿಸುತ್ತಿದ್ದರು. ಇವರು ಅನಾಕನ ಸಂತತಿಯವರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರು ಬೆಟ್ಟವನ್ನು ಹತ್ತಿ ಕಾನಾನ್ ದೇಶದ ದಕ್ಷಿಣ ಪ್ರಾಂತ್ಯವನ್ನು ದಾಟಿ ಹೆಬ್ರೋನಿಗೆ ಬಂದರು. ಅಲ್ಲಿ ಅಹೀಮನ್, ಶೇಷೈ, ತಲ್ಮೈ ಎಂಬ ಉನ್ನತ ಪುರುಷರು ಇದ್ದರು. ಹೆಬ್ರೋನ್ ಪಟ್ಟಣವು ಐಗುಪ್ತ ದೇಶದಲ್ಲಿರುವ ಚೋವನ್ ಪಟ್ಟಣಕ್ಕಿಂತ ಏಳು ವರ್ಷ ಮೊದಲು ನಿರ್ಮಿಸಲಾಗಿತ್ತು.
Kannada BSI Bible 2016
ಅವರು ದಕ್ಷಿಣದ ಕಡೆಯಲ್ಲಿ ಹೆಬ್ರೋನಿನ ವರೆಗೆ ಬಂದರು; ಅಲ್ಲಿ ಅನಾಕನ ಮಕ್ಕಳಾದ ಅಹೀಮನ ಶೇಷೈಯನೂ ತಲ್ಮೈಯನೂ ಇದ್ದರು. ಹೆಬ್ರೋನು ಐಗುಪ್ತದೇಶದ ಚೋವನಿಗಿಂತ ಏಳು ವರುಷಗಳ ಮೊದಲು ಕಟ್ಟಲ್ಪ ಟ್ಟಿತ್ತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರು ಬೆಟ್ಟವನ್ನು ಹತ್ತಿ ಕಾನಾನ್‍ದೇಶದ ದಕ್ಷಿಣಪ್ರಾಂತ್ಯವನ್ನು ದಾಟಿ ಹೆಬ್ರೋನಿಗೆ ಬಂದರು. ಅಲ್ಲಿ ಅಹೀಮನ್, ಶೇಷೈ, ತಲ್ಮೈ ಎಂಬ ಉನ್ನತರಾದ ಪುರುಷರು ಇದ್ದರು. ಹೆಬ್ರೋನ್ ಪಟ್ಟಣವು ಐಗುಪ್ತದೇಶದಲ್ಲಿರುವ ಚೋವನ್ ಪಟ್ಟಣಕ್ಕಿಂತ ಏಳು ವರುಷ ಮುಂಚೆ ಕಟ್ಟಲ್ಪಟ್ಟದ್ದು.
Kannada Bible (KNCL) BSI 2016
ಅವರು ಬೆಟ್ಟವನ್ನು ಹತ್ತಿ ನೆಗೆಬನ್ನು ದಾಟಿ, ಹೆಬ್ರೋನಿಗೆ ಬಂದರು. ಅಲ್ಲಿ ‘ಅನಕಿಮ್’ ವಂಶಸ್ಥರಾದ ಅಹೀಮನ್, ಶೇಷೈ, ತಲ್ಮೈ ಎಂಬವರು ಇದ್ದರು. (ಹೆಬ್ರೋನ್ ಪಟ್ಟಣ ಈಜಿಪ್ಟ್ ದೇಶದಲ್ಲಿರುವ ಚೋಮ್ ಪಟ್ಟಣಕ್ಕಿಂತ ಏಳು ವರ್ಷ ಮೊದಲೆ ಕಟ್ಟಲ್ಪಟ್ಟಿತ್ತು)
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು ನೆಗೆವನ್ನು ದಾಟಿ ಹೆಬ್ರೋನಿನವರೆಗೆ ಬಂದರು. ಅಲ್ಲಿ ಅನಾಕನ ಮಕ್ಕಳಾದ ಅಹೀಮನ್, ಶೇಷೈ, ತಲ್ಮೈ ಎಂಬ ಉನ್ನತರಾದ ಪುರುಷರು ಇದ್ದರು. ಹೆಬ್ರೋನ್ ಪಟ್ಟಣವು ಈಜಿಪ್ಟ್ ದೇಶದ ಚೋವನ್ ಪಟ್ಟಣಕ್ಕಿಂತ ಏಳು ವರ್ಷಗಳು ಮೊದಲು ನಿರ್ಮಿಸಲಾಗಿತ್ತು.