Numbers 13:28 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅಲ್ಲಿನ ಜನರು ಬಲಿಷ್ಠರು. ಪಟ್ಟಣಗಳೂ ಬಹಳ ದೊಡ್ಡದಾಗಿವೆ. ಪಟ್ಟಣಗಳು ಕೋಟೆಕೊತ್ತಲುಗಳುಳ್ಳದಾಗಿವೆ. ನಾವು ಕೆಲವು ಅನಾಕ್ಯರನ್ನು ಸಹ ನೋಡಿದೆವು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆದರೆ ಆ ದೇಶದ ನಿವಾಸಿಗಳು ಬಲಿಷ್ಠರು: ಅವರಿರುವ ಪಟ್ಟಣಗಳು ದೊಡ್ಡದಾಗಿಯೂ, ಕೋಟೆ ಕೊತ್ತಲುಗಳುಳ್ಳದ್ದಾಗಿಯೂ ಇದೆ. ಅದಲ್ಲದೆ ಅಲ್ಲಿ ಉನ್ನತ ಪುರುಷರನ್ನು ನೋಡಿದೆವು.
Kannada BSI Bible 2016
ಆದರೆ ಆ ದೇಶದಲ್ಲಿ ವಾಸವಾಗಿರುವ ಜನರು ಬಲಿಷ್ಠರು; ಪಟ್ಟಣ ಗಳು ಭದ್ರವಾಗಿಯೂ ಬಹಳ ದೊಡ್ಡವುಗಳಾಗಿಯೂ ಅವೆ. ಮತ್ತು ಅನಾಕನ ಮಕ್ಕಳನ್ನು ಅಲ್ಲಿ ನಾವು ಕಂಡೆವು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆದರೆ ಆ ದೇಶದ ನಿವಾಸಿಗಳು ಬಲಿಷ್ಠರು; ಅವರಿರುವ ಪಟ್ಟಣಗಳು ದೊಡ್ಡವಾಗಿಯೂ ಕೋಟೆ ಕೊತ್ತಲುಗಳುಳ್ಳವಾಗಿಯೂ ಅವೆ; ಅದಲ್ಲದೆ ಅಲ್ಲಿ ಉನ್ನತರಾದ ಪುರುಷರನ್ನು ನೋಡಿದೆವು.
Kannada Bible (KNCL) BSI 2016
ಅಂತೆಯೇ ಆ ನಾಡಿನ ನಿವಾಸಿಗಳು ಬಲಿಷ್ಠರು. ಅವರಿರುವ ಪಟ್ಟಣಗಳು ದೊಡ್ಡವು; ಅವು ಕೋಟೆ ಕೊತ್ತಲುಗಳಿಂದ ಕೂಡಿವೆ. ಅದೂ ಅಲ್ಲದೆ ಅಲ್ಲಿ ‘ಅನಕಿಮ್’ ವಂಶಸ್ಥರನ್ನು ಕಂಡೆವು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಆ ದೇಶದಲ್ಲಿ ವಾಸವಾಗಿರುವ ಜನರು ಬಲಿಷ್ಠರು. ಪಟ್ಟಣಗಳು ಭದ್ರವಾಗಿಯೂ, ಬಹಳ ದೊಡ್ಡದಾಗಿಯೂ ಇವೆ. ಅನಾಕನ ಮಕ್ಕಳನ್ನು ನಾವು ಅಲ್ಲಿ ಕಂಡೆವು.