Numbers 14:34 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನೀವು ಆ ದೇಶವನ್ನು ಸಂಚರಿಸಿ ನೋಡಿದ ನಲವತ್ತು ದಿನಗಳಿಗೆ ಸಮನಾಗಿ, ದಿನ ಒಂದಕ್ಕೆ ಒಂದು ಸಂವತ್ಸರದ ಮೇರೆಗೆ ನಲವತ್ತು ವರ್ಷ ನಿಮ್ಮ ಪಾಪದ ಫಲವನ್ನು ಅನುಭವಿಸುವಿರಿ. ನನ್ನನ್ನು ತಿರಸ್ಕರಿಸುವುದೆಂದರೆ ಏನೆಂಬುದು ನಿಮಗೆ ಗೊತ್ತಾಗುತ್ತದೆ.’
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀವು ಆ ದೇಶವನ್ನು ಸಂಚರಿಸಿ ನೋಡಿದ ನಲ್ವತ್ತು ದಿನಗಳ ಪ್ರಕಾರ, ಒಂದು ದಿನಕ್ಕೆ ಒಂದು ವರ್ಷವಾಗಿ ಈ ಪ್ರಕಾರ ನಲ್ವತ್ತು ವರ್ಷ ನಿಮ್ಮ ಪಾಪಫಲವನ್ನು ಅನುಭವಿಸುವವರಾಗಿ ನಾನು ಕೈಬಿಟ್ಟವರ ಗತಿ ಎಂಥದೆಂದು ತಿಳಿದುಕೊಳ್ಳಬೇಕು.
Kannada BSI Bible 2016
ನೀವು ಆ ದೇಶವನ್ನು ಪರೀಕ್ಷಿಸಿದ ನಾಲ್ವತ್ತು ದಿವಸಗಳ ಪ್ರಕಾರ ಒಂದು ದಿನಕ್ಕೆ ಒಂದು ವರುಷವಾಗಿ ಈ ಪ್ರಕಾರ ನಾಲ್ವತ್ತು ವರುಷ ನಿಮ್ಮ ಅಪರಾಧಗಳನ್ನು ಹೊತ್ತು ನನ್ನ ವಾಗ್ದಾನವನ್ನು ಭಂಗಪಡಿಸಿದ ಫಲವನ್ನು ನೀವು ಅನುಭವಿಸುವಿರಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀವು ಆ ದೇಶವನ್ನು ಸಂಚರಿಸಿ ನೋಡಿದ ನಾಲ್ವತ್ತು ದಿನಗಳಿಗೆ ಸಮನಾಗಿ, ದಿನ ಒಂದಕ್ಕೆ ಒಂದು ಸಂವತ್ಸರದ ಮೇರೆಗೆ, ನಾಲ್ವತ್ತು ವರುಷ ನಿಮ್ಮ ಪಾಪದ ಫಲವನ್ನು ಅನುಭವಿಸುವವರಾಗಿ ನಾನು ಕೈಬಿಟ್ಟವರ ಗತಿ ಎಂಥದೆಂದು ತಿಳಿದುಕೊಳ್ಳಬೇಕು.
Kannada Bible (KNCL) BSI 2016
ನೀವು ಆ ನಾಡನ್ನು ನಾಲ್ವತ್ತು ದಿನಗಳು ಸಂಚರಿಸಿ ನೋಡಿದಿರಿ. ಅಂತೆಯೇ ಒಂದು ದಿನಕ್ಕೆ ಒಂದು ವರ್ಷದ ಮೇರೆಗೆ ನಾಲ್ವತ್ತು ವರ್ಷ ನಿಮ್ಮ ಪಾಪದ ಫಲವನ್ನು ಅನುಭವಿಸಿರಿ; ನಾನು ಕೈಬಿಟ್ಟವರ ಗತಿ ಎಂಥದೆಂದು ತಿಳಿದುಕೊಳ್ಳುವಿರಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೀವು ಆ ದೇಶವನ್ನು ಪರೀಕ್ಷಿಸಿದ ನಲವತ್ತು ದಿವಸಗಳ ಪ್ರಕಾರ ಒಂದು ದಿನಕ್ಕೆ ಒಂದು ವರುಷವಾಗಿ ಈ ಪ್ರಕಾರ ನಲವತ್ತು ವರುಷ ನಿಮ್ಮ ಅಪರಾಧಗಳನ್ನು ಹೊತ್ತು, ನನ್ನ ವಾಗ್ದಾನವನ್ನು ಭಂಗಪಡಿಸಿದ ಫಲವನ್ನು ನೀವು ಅನುಭವಿಸುವಿರಿ.