Numbers 15:14 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಿಮ್ಮ ಮಧ್ಯದಲ್ಲಿ ವಾಸಿಸುವ ವಿದೇಶಿಯರಲ್ಲಿ ಯಾವನೇ ಆಗಲಿ, ಯೆಹೋವನಿಗೆ ಸುಗಂಧಹೋಮ ಮಾಡಬೇಕಾದರೆ ನಿಮ್ಮಂತೆಯೇ ಅವನು ಮಾಡಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಿಮ್ಮ ಮಧ್ಯದಲ್ಲಿ ಇಲ್ಲವೆ ನಿಮ್ಮ ಸಂತತಿಯವರ ಮಧ್ಯದಲ್ಲಿ ಒಕ್ಕಲಿರುವ ಅನ್ಯದೇಶದವನಾಗಲಿ ಅಥವಾ ಇಳಿದುಕೊಂಡಿರುವ ಯಾರೇ ಆಗಲಿ ಯೆಹೋವನಿಗೆ ಸುಗಂಧ ಹೋಮ ಮಾಡಬೇಕಾದರೆ ನಿಮ್ಮಂತೆಯೇ ಅವನೂ ಮಾಡಬೇಕು.
Kannada BSI Bible 2016
ನಿಮ್ಮ ಸಂಗಡ ಪ್ರಯಾಣಮಾಡುವ ಪರದೇಶಿಯಾಗಲಿ ಇಲ್ಲವೆ ನಿಮ್ಮ ಮುಂದಿನ ಸಂತತಿಯವರ ಸಂಗಡ ಇರುವವನಾಗಲಿ ಕರ್ತನಿಗೆ ಸುವಾಸನೆಯನ್ನುಂಟುಮಾಡುವ ಬೆಂಕಿಯ ಅರ್ಪಣೆಯನ್ನು ಅರ್ಪಿಸುವಾಗ ನೀವು ಹೇಗೆ ಮಾಡು ತ್ತೀರೋ ಹಾಗೆಯೇ ಅವನು ಮಾಡಲಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ನಿಮ್ಮ ಮಧ್ಯದಲ್ಲಿ ಇಲ್ಲವೆ ನಿಮ್ಮ ಸಂತತಿಯವರ ಮಧ್ಯದಲ್ಲಿ ಒಕ್ಕಲಿರುವ ಅನ್ಯದೇಶದವನಾಗಲಿ ಇಳುಕೊಂಡಿರುವ ಯಾವನೇ ಆಗಲಿ ಯೆಹೋವನಿಗೆ ಸುಗಂಧಹೋಮಮಾಡಬೇಕಾದರೆ ನಿಮ್ಮಂತೆಯೇ ಅವನೂ ಮಾಡಬೇಕು.
Kannada Bible (KNCL) BSI 2016
ನಿಮ್ಮ ಮಧ್ಯೆ, ಇಲ್ಲವೆ ನಿಮ್ಮ ಸಂತತಿಯವರ ಮಧ್ಯೆ ವಾಸಿಸುವ ಅನ್ಯದೇಶೀಯನಾಗಲಿ ಪ್ರವಾಸಿಯಾಗಲಿ ಸುಗಂಧ ದಹನಬಲಿಯನ್ನು ಅರ್ಪಿಸಲಾಶಿಸಿದರೆ ನಿಮ್ಮಂತೆಯೇ ಅವನೂ ಮಾಡಬೇಕು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಿಮ್ಮ ಸಂಗಡ ಪ್ರಯಾಣ ಮಾಡುವ ಪರದೇಶಿಯಾಗಲಿ ಇಲ್ಲವೆ ನಿಮ್ಮ ಮುಂದಿನ ಸಂತತಿಯವರ ಸಂಗಡ ಇರುವವನಾಗಲಿ, ಯೆಹೋವ ದೇವರಿಗೆ ಸುಗಂಧದ ದಹನಬಲಿಯನ್ನು ಸಮರ್ಪಿಸಿದಾಗ, ನೀವು ಹೇಗೆ ಮಾಡುತ್ತೀರೋ ಹಾಗೆಯೇ ಅವನು ಮಾಡಲಿ.