Numbers 15:28 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆಗ ಯಾಜಕನು ನಿರುದ್ದೇಶದಿಂದ ತಪ್ಪುಮಾಡಿದವನ ಕ್ಷಮಾಪಣೆಗಾಗಿ ಯೆಹೋವನ ಸನ್ನಿಧಿಯಲ್ಲಿ ಪ್ರಾಯಶ್ಚಿತ್ತ ಮಾಡುವನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ತಿಳಿಯದೆ ತಪ್ಪು ಮಾಡಿದವನಿಗೋಸ್ಕರ ಯಾಜಕನು ಯೆಹೋವನ ಸನ್ನಿಧಿಯಲ್ಲಿ ದೋಷಪರಿಹಾರವನ್ನು ಮಾಡಿದಾಗ ಅವನಿಗೆ ಕ್ಷಮಾಪಣೆಯಾಗುವುದು.
Kannada BSI Bible 2016
ತಿಳಿಯದೆ ಪಾಪಮಾಡಿ ದಂಥ ಆ ಪಾಪಮಾಡಿದವನಿಗೋಸ್ಕರ ಯಾಜಕನು ಕರ್ತನ ಮುಂದೆ ಪ್ರಾಯಶ್ಚಿತ್ತಮಾಡಬೇಕು. ಅದು ಪರಿಹಾರವಾಗುವ ಹಾಗೆ ಅದಕ್ಕೋಸ್ಕರ ಪ್ರಾಯಶ್ಚಿತ್ತ ಮಾಡಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ತಿಳಿಯದೆ ತಪ್ಪುಮಾಡಿದವನಿಗೋಸ್ಕರ ಯಾಜಕನು ಯೆಹೋವನ ಸನ್ನಿಧಿಯಲ್ಲಿ ದೋಷಪರಿಹಾರವನ್ನು ಮಾಡಿದಾಗ ಅವನಿಗೆ ಕ್ಷಮಾಪಣೆಯಾಗುವದು.
Kannada Bible (KNCL) BSI 2016
ತಿಳಿಯದೆ ತಪ್ಪುಮಾಡಿದ ಅಂಥವನ ಪರವಾಗಿ ಯಾಜಕನು ಸರ್ವೇಶ್ವರನ ಸನ್ನಿಧಿಯಲ್ಲಿ ದೋಷಪರಿಹಾರಕ ವಿಧಿಯನ್ನು ನೆರವೇರಿಸಿದರೆ ಅವನಿಗೆ ಕ್ಷಮೆ ದೊರಕುವುದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ತಿಳಿಯದೆ ಪಾಪ ಮಾಡಿದವನಿಗೋಸ್ಕರ ಯಾಜಕನು ಯೆಹೋವ ದೇವರ ಮುಂದೆ ಪ್ರಾಯಶ್ಚಿತ್ತ ಮಾಡಬೇಕು. ಅದು ಪಾಪಕ್ಷಮಾಪಣೆಯಾಗುವ ಹಾಗೆ ಅದಕ್ಕೋಸ್ಕರ ಪ್ರಾಯಶ್ಚಿತ್ತ ಮಾಡಬೇಕು.