Numbers 16:17 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಿಮ್ಮಲ್ಲಿ ಪ್ರತಿಯೊಬ್ಬನು ತನ್ನತನ್ನ ಧೂಪಾರತಿಯನ್ನು ಅಂದರೆ ಒಟ್ಟಾಗಿ ಇನ್ನೂರೈವತ್ತು ಧೂಪಾರತಿಗಳನ್ನು ತೆಗೆದುಕೊಂಡು ಧೂಪಹಾಕಿ ಯೆಹೋವನ ಸನ್ನಿಧಿಗೆ ಬರಬೇಕು. ಹಾಗೆಯೇ ನೀನೂ ಆರೋನನೂ ನಿಮ್ಮನಿಮ್ಮ ಧೂಪಾರತಿಗಳನ್ನು ತೆಗೆದುಕೊಂಡು ಬರಬೇಕು” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರಲ್ಲಿ ಒಬ್ಬೊಬ್ಬನು ತನ್ನ ತನ್ನ ಧೂಪಾರತಿಗಳನ್ನು, ಒಟ್ಟಾಗಿ ಇನ್ನೂರೈವತ್ತು ಧೂಪಾರತಿಯನ್ನು ತೆಗೆದುಕೊಂಡು ಧೂಪಹಾಕಿ ಯೆಹೋವನ ಸನ್ನಿಧಿಗೆ ಬರಬೇಕು. ಹಾಗೆಯೇ ನೀನು ಮತ್ತು ಆರೋನನು ನಿಮ್ಮ ನಿಮ್ಮ ಧೂಪಾರತಿಗಳನ್ನು ತೆಗೆದುಕೊಂಡು ಬರಬೇಕು” ಎಂದು ಹೇಳಿದನು.
Kannada BSI Bible 2016
ಒಬ್ಬೊಬ್ಬನು ತನ್ನ ತನ್ನ ಧೂಪದ ಪಾತ್ರೆಯನ್ನು ತಕ್ಕೊಂಡು ಅವುಗಳಲ್ಲಿ ಧೂಪವನ್ನು ಹಾಕಿ ಒಬ್ಬನಿಗೆ ಒಂದರ ಪ್ರಕಾರ ಇನ್ನೂರ ಐವತ್ತು ನಿಮ್ಮ ಧೂಪ ಪಾತ್ರೆಗಳನ್ನು ಕರ್ತನ ಎದುರಿಗೆ ತನ್ನಿರಿ. ನೀನೂ ಆರೋನನೂ ನಿಮ್ಮ ನಿಮ್ಮ ಧೂಪದ ಪಾತ್ರೆಗಳನ್ನು ತಕ್ಕೊಂಡು ಬನ್ನಿರಿ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರಲ್ಲಿ ಒಬ್ಬೊಬ್ಬನು ತನ್ನ ತನ್ನ ಧೂಪಾರತಿಯನ್ನು, ಅಂದರೆ ಒಟ್ಟಾಗಿ ಇನ್ನೂರೈವತ್ತು ಧೂಪಾರತಿಗಳನ್ನು ತೆಗೆದುಕೊಂಡು ಧೂಪಹಾಕಿ ಯೆಹೋವನ ಸನ್ನಿಧಿಗೆ ಬರಬೇಕು; ಹಾಗೆಯೇ ನೀನೂ ಆರೋನನೂ ನಿಮ್ಮ ನಿಮ್ಮ ಧೂಪಾರತಿಗಳನ್ನು ತೆಗೆದುಕೊಂಡು ಬರಬೇಕು ಎಂದು ಹೇಳಿದನು.
Kannada Bible (KNCL) BSI 2016
ಪಂಗಡದ ಪ್ರತಿಯೊಬ್ಬನು ತನ್ನ ತನ್ನ ಧೂಪಾರತಿಯನ್ನು ಅಂದರೆ ಒಟ್ಟು 250 ಧೂಪಾರತಿಗಳನ್ನು ತೆಗೆದುಕೊಂಡು ಧೂಪಹಾಕಿ ಸರ್ವೇಶ್ವರನ ಸನ್ನಿಧಿಗೆ ಬರಬೇಕು. ನೀನು ಮತ್ತು ಆರೋನನು ಕೂಡ ನಿಮ್ಮ ನಿಮ್ಮ ಧೂಪಾರತಿಗಳನ್ನು ತೆಗೆದುಕೊಂಡು ಬರಬೇಕು,” ಎಂದು ಹೇಳಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಒಬ್ಬೊಬ್ಬನು ತನ್ನ ತನ್ನ ಧೂಪ ಪಾತ್ರೆಯನ್ನು ತೆಗೆದುಕೊಂಡು ಅವುಗಳಲ್ಲಿ ಧೂಪವನ್ನು ಹಾಕಿ, ಒಬ್ಬನಿಗೆ ಒಂದರ ಪ್ರಕಾರ ಇನ್ನೂರ ಐವತ್ತು ಧೂಪ ಪಾತ್ರೆಗಳಾದ ನಿಮ್ಮ ಧೂಪ ಪಾತ್ರೆಗಳನ್ನು ಯೆಹೋವ ದೇವರ ಎದುರಿಗೆ ತನ್ನಿರಿ. ನೀನೂ, ಆರೋನನೂ, ನಿಮ್ಮ ನಿಮ್ಮ ಧೂಪದ ಪಾತ್ರೆಗಳನ್ನು ತೆಗೆದುಕೊಂಡು ಬನ್ನಿರಿ,” ಎಂದನು.