Numbers 16:39 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯೆಹೋವನು ಮೋಶೆಗೆ ಕೊಟ್ಟ ಅಪ್ಪಣೆಯ ಮೇರೆಗೆ ಯಾಜಕನಾದ ಎಲ್ಲಾಜಾರನು ಸುಟ್ಟುಹೋದವರಿಂದ ತರಲ್ಪಟ್ಟಿದ್ದ ಆ ತಾಮ್ರದ ಧೂಪಾರತಿಗಳನ್ನು ತೆಗೆದುಕೊಂಡು ತಗಡುಗಳಾಗಿ ಹೊಡಿಸಿ ಯಜ್ಞವೇದಿಕೆಗೆ ಮುಚ್ಚಳವನ್ನು ಮಾಡಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಯಾಜಕನಾದ ಎಲ್ಲಾಜಾರನು ಯೆಹೋವನು ಮೋಶೆಯ ಮೂಲಕ ಹೇಳಿದ ಅಪ್ಪಣೆಯ ಪ್ರಕಾರ ದಹಿಸಿಹೋದವರು ಅರ್ಪಿಸಿದ ಆ ತಾಮ್ರದ ಧೂಪಾರತಿಗಳನ್ನು ತೆಗೆದುಕೊಂಡು ತಗಡುಗಳಾಗಿ ಮಾಡಿಸಿ, ಯಜ್ಞವೇದಿಯನ್ನು ಮುಚ್ಚಿದನು.
Kannada BSI Bible 2016
ಆಗ ಸುಟ್ಟು ಹೋದವರು ಅರ್ಪಿಸಿದ ಹಿತ್ತಾಳೆಯ ಧೂಪದಪಾತ್ರೆಗಳನ್ನು ಯಾಜಕನಾದ ಎಲಿಯಾಜರನು ತಕ್ಕೊಂಡು ಬಲಿಪೀಠವನ್ನು ಮುಚ್ಚುವದಕ್ಕಾಗಿ ಅಗಲ ವಾದ ತಗಡುಗಳನ್ನಾಗಿ ಮಾಡಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೋವನು ಮೋಶೆಯ ಮೂಲಕ ಹೇಳಿದ ಅಪ್ಪಣೆಯ ಮೇರೆಗೆ ಯಾಜಕನಾದ ಎಲ್ಲಾಜಾರನು ಸುಟ್ಟುಹೋದವರಿಂದ ಮೊದಲು ತರಲ್ಪಟ್ಟಿದ್ದ ಆ ತಾಮ್ರದ ಧೂಪಾರತಿಗಳನ್ನು ತೆಗೆದುಕೊಂಡು ತಗಡುಗಳಾಗಿ ಹೊಡಿಸಿ ಯಜ್ಞವೇದಿಗೆ ಮುಚ್ಚಳವನ್ನು ಮಾಡಿಸಿದನು.
Kannada Bible (KNCL) BSI 2016
ಮೋಶೆಯ ಮುಖಾಂತರ ಸರ್ವೇಶ್ವರ ಹೇಳಿದ ಅಪ್ಪಣೆಯ ಮೇರೆಗೆ ಯಾಜಕ ಎಲ್ಲಾಜಾರನು, ಸುಟ್ಟುಹೋದವರು ತಂದಿದ್ದ ಆ ಕಂಚಿನ ಧೂಪಾರತಿಗಳನ್ನು ತಗಡುಗಳನ್ನಾಗಿ ತಟ್ಟಿಸಿ ಬಲಿಪೀಠಕ್ಕೆ ಮುಚ್ಚಳವನ್ನು ಮಾಡಿಸಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಯಾಜಕನಾದ ಎಲಿಯಾಜರನು ಯೆಹೋವ ದೇವರು ಮೋಶೆಯ ಮೂಲಕ ಹೇಳಿದ ಅಪ್ಪಣೆಯ ಪ್ರಕಾರ ಸುಟ್ಟು ಹೋದವರು ಅರ್ಪಿಸಿದ ಕಂಚಿನ ಧೂಪದ ಪಾತ್ರೆಗಳನ್ನು ತೆಗೆದುಕೊಂಡು, ಬಲಿಪೀಠವನ್ನು ಮುಚ್ಚುವುದಕ್ಕಾಗಿ ಅವುಗಳನ್ನು ಅಗಲವಾದ ತಗಡುಗಳನ್ನಾಗಿ ಮಾಡಿದನು.