Numbers 18:4 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅವರು ದೇವದರ್ಶನಗುಡಾರವನ್ನು ಕಾಯಬೇಕು ಮತ್ತು ಗುಡಾರಕ್ಕೆ ಸಂಬಂಧಿಸಿದ ಭಾರವಾದ ಕೆಲಸವನ್ನು ಮಾಡಬೇಕು. ಬೇರೆ ಯಾರೂ ನಿನ್ನೊಂದಿಗೆ ಭಾಗಿಗಳಾಗಿರಬಾರದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರೇ ನಿನ್ನ ಜೊತೆಯಲ್ಲಿದ್ದು ದೇವದರ್ಶನದ ಗುಡಾರವನ್ನು ನೋಡಿಕೊಂಡು ಅದರ ಸಕಲ ಸೇವಾಕಾರ್ಯವನ್ನು ಮಾಡಬೇಕು. ಇತರ ಕುಲದವರು ನಿಮ್ಮ ಹತ್ತಿರಕ್ಕೆ ಬರಬಾರದು.
Kannada BSI Bible 2016
ಆದರೆ ಅವರು ನಿನ್ನ ಸಹಾಯಕರಾಗಿದ್ದು ಗುಡಾರದ ಎಲ್ಲಾ ಸೇವೆಗೋಸ್ಕರ ಸಭೆಯ ಗುಡಾರದ ಅಪ್ಪಣೆಯನ್ನು ಕಾಪಾಡಬೇಕು; ಪರಕೀಯನು ನಿಮ್ಮ ಸವಿಾಪಕ್ಕೆ ಬರ ಬಾರದು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರೇ ನಿನ್ನ ಜೊತೆಯಲ್ಲಿದ್ದು ದೇವದರ್ಶನದ ಗುಡಾರವನ್ನು ನೋಡಿಕೊಂಡು ಅದರ ಸಕಲ ಪರಿಚರ್ಯವನ್ನು ಮಾಡಬೇಕು; ಇತರ ಕುಲದವರು ನಿಮ್ಮ ಜೊತೆಯಲ್ಲಿರಕೂಡದು.
Kannada Bible (KNCL) BSI 2016
ಅವರು ನಿಮ್ಮ ಜೊತೆ ಸೇರಿ ದೇವದರ್ಶನದ ಗುಡಾರವನ್ನು ನೋಡಿಕೊಳ್ಳಲಿ; ಅದರ ಎಲ್ಲ ಪರಿಚರ್ಯವನ್ನು ಮಾಡಲಿ. ಇತರ ಕುಲದವರ ಜೊತೆ ನಿಮಗೆ ಬೇಡ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಅವರು ನಿನ್ನ ಸಹಾಯಕರಾಗಿದ್ದು, ದೇವದರ್ಶನದ ಗುಡಾರದ ಎಲ್ಲಾ ಕಾರ್ಯಗಳಿಗೂ ಅದನ್ನು ಕಾಪಾಡುವುದಕ್ಕೂ ಜವಾಬ್ದಾರರಾಗಿರುವರು. ಬೇರೆ ಕುಲದವರು ನಿಮ್ಮ ಸಮೀಪಕ್ಕೆ ಬರಬಾರದು.