Numbers 19:12 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅವನು ಶುದ್ಧೀಕರಣದ ನೀರಿನಿಂದ ಮೂರನೆಯ ದಿನದಲ್ಲಿ ಮತ್ತು ತಿರುಗಿ ಏಳನೆಯ ದಿನದಲ್ಲಿ ತನ್ನನ್ನು ಶುದ್ಧೀಕರಿಸಿಕೊಳ್ಳಬೇಕು. ಆಗ ಅವನು ಶುದ್ಧನಾಗಿರುವನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಮೂರನೆಯ ದಿನದಲ್ಲಿ ಆ ಬೂದಿಯಿಂದ ದೋಷಪರಿಹಾರ ಮಾಡಿಕೊಂಡು ಏಳನೆಯ ದಿನದಲ್ಲಿ ಶುದ್ಧನಾಗುವನು. ಮೂರನೆಯ ದಿನದಲ್ಲಿ ಅವನು ದೋಷಪರಿಹಾರ ಮಾಡಿಕೊಳ್ಳದೆ ಹೋದರೆ ಏಳನೆಯ ದಿನದಲ್ಲಿಯೂ ಶುದ್ಧನಾಗುವುದಿಲ್ಲ.
Kannada BSI Bible 2016
ಅವನು ಇದ ರಿಂದ ಮೂರನೇ ದಿವಸದಲ್ಲಿ ತನ್ನನ್ನು ಶುದ್ಧೀಕರಿಸಿ ಕೊಂಡು ಏಳನೇ ದಿವಸದಲ್ಲಿ ಶುದ್ಧನಾಗಬೇಕು; ಆದರೆ ಅವನು ಮೂರನೇ ದಿವಸದಲ್ಲಿ ತನ್ನನ್ನು ಶುದ್ಧಮಾಡಿ ಕೊಳ್ಳದಿದ್ದರೆ ಏಳನೇ ದಿವಸದಲ್ಲಿ ಶುದ್ಧನಾಗಲಾರನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಮೂರನೆಯ ದಿನದಲ್ಲಿ ಆ ಬೂದಿಯಿಂದ ದೋಷಪರಿಹಾರಮಾಡಿಕೊಂಡು ಏಳನೆಯ ದಿನದಲ್ಲಿ ಶುದ್ಧನಾಗುವನು. ಮೂರನೆಯ ದಿನದಲ್ಲಿ ಅವನು ದೋಷಪರಿಹಾರಮಾಡಿಕೊಳ್ಳದೆ ಹೋದರೆ ಏಳನೆಯ ದಿನದಲ್ಲಿಯೂ ಶುದ್ಧನಾಗುವದಿಲ್ಲ.
Kannada Bible (KNCL) BSI 2016
ಮೂರನೇ ದಿನ ಆ ಬೂದಿಯಿಂದ ದೋಷಪರಿಹಾರ ಮಾಡಿಕೊಂಡು ಏಳನೆಯ ದಿನ ಶುದ್ಧನಾಗುವನು. ಮೂರನೆಯ ದಿನ ಅವನು ದೋಷಪರಿಹಾರ ಮಾಡಿಕೊಳ್ಳದೆ ಹೋದರೆ ಏಳನೆ ದಿನದಲ್ಲೂ ಶುದ್ಧನಾಗನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನು ಇದರಿಂದ ಮೂರನೆಯ ದಿವಸದಲ್ಲಿ ತನ್ನನ್ನು ಶುದ್ಧೀಕರಿಸಿಕೊಂಡು ಏಳನೆಯ ದಿವಸದಲ್ಲಿ ಶುದ್ಧನಾಗಬೇಕು. ಆದರೆ ಅವನು ಮೂರನೆಯ ದಿವಸದಲ್ಲಿ ತನ್ನನ್ನು ಶುದ್ಧಮಾಡಿಕೊಳ್ಳದಿದ್ದರೆ, ಏಳನೆಯ ದಿವಸದಲ್ಲಿ ಶುದ್ಧನಾಗಲಾರನು.