Numbers 19:14 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ಯಾವನಾದರೂ ಗುಡಾರದಲ್ಲಿ ಸತ್ತರೆ ಅನುಸರಿಸಬೇಕಾದ ನಿಯಮವಿದು: ಒಬ್ಬನು ಗುಡಾರದಲ್ಲಿ ಸತ್ತರೆ, ಆ ಗುಡಾರವನ್ನು ಪ್ರವೇಶಿಸುವ ಪ್ರತಿಯೊಬ್ಬನು ಮತ್ತು ಆ ಗುಡಾರದಲ್ಲಿರುವ ಪ್ರತಿಯೊಬ್ಬನು ಅಶುದ್ಧನಾಗುವನು. ಅವರು ಏಳು ದಿನಗಳವರೆಗೆ ಅಶುದ್ಧರಾಗಿರುವರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ಯಾರಾದರೂ ಡೇರೆಯಲ್ಲಿ ಸತ್ತರೆ ಅವನ ವಿಷಯವಾದ ನಿಯಮವೇನೆಂದರೆ: ಆ ಡೇರೆಯಲ್ಲಿರುವವರೆಲ್ಲರೂ ಮತ್ತು ಅದರೊಳಗೆ ಪ್ರವೇಶಿಸುವವರು ಏಳು ದಿನಗಳವರೆಗೆ ಅಶುದ್ಧರಾಗಿರಬೇಕು.
Kannada BSI Bible 2016
ಒಬ್ಬ ಮನುಷ್ಯನು ಡೇರೆಯಲ್ಲಿ ಸತ್ತಾಗ ಅವನ ವಿಷಯವಾದ ಆಜ್ಞೆ ಏನಂದರೆ--ಆ ಡೇರೆಯೊಳಗೆ ಪ್ರವೇಶಿಸುವವರೆಲ್ಲರೂ ಡೇರೆಯಲ್ಲಿರುವವರೆ ಲ್ಲರೂ ಏಳು ದಿವಸಗಳ ವರೆಗೆ ಅಶುದ್ಧರಾಗಿರಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
[ಹೊಲೆಗಳೆವ] ಕಟ್ಟಳೆ ಹೇಗಂದರೆ - ಯಾರಾದರೂ ಡೇರೆಯೊಳಗೆ ಸತ್ತ ಸಂದರ್ಭದಲ್ಲಿ ಆ ಡೇರೆಯಲ್ಲಿರುವವರೆಲ್ಲರೂ ಅದರೊಳಗೆ ಬರುವವರೂ ಏಳು ದಿನಗಳವರೆಗೆ ಅಶುದ್ಧರಾಗಿರಬೇಕು.
Kannada Bible (KNCL) BSI 2016
“ಮೈಲಿಗೆ ನಿಯಮವಿದು: ಯಾರಾದರೂ ಡೇರೆಯೊಳಗೆ ಸತ್ತ ಸಂದರ್ಭದಲ್ಲಿ ಆ ಡೇರೆಯೊಳಗಿರುವವರೆಲ್ಲರು ಹಾಗು ಅದರೊಳಗೆ ಬರುವವರು ಕೂಡ ಮೈಲಿಗೆಯಾಗಿರುತ್ತಾರೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಒಬ್ಬ ಮನುಷ್ಯನು ಡೇರೆಯಲ್ಲಿ ಸತ್ತರೆ, ಅವನ ವಿಷಯವಾದ ನಿಯಮವೇನೆಂದರೆ: ಆ ಡೇರೆಯೊಳಗೆ ಪ್ರವೇಶಿಸುವವರೆಲ್ಲರೂ, ಡೇರೆಯಲ್ಲಿರುವವರೆಲ್ಲರೂ ಏಳು ದಿವಸಗಳವರೆಗೆ ಅಶುದ್ಧರಾಗಿರುವರು.