Numbers 19:2 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ಯೆಹೋವನು ಆಜ್ಞಾಪಿಸಿದ ಸಂಪ್ರದಾಯದ ನಿಯಮವಿದು. ಯಾವ ದೋಷವಿಲ್ಲದ ಕೆಂಪು ಹಸುವನ್ನು ನಿನಗೆ ತಂದುಕೊಡುವಂತೆ ಇಸ್ರೇಲರಿಗೆ ಹೇಳು. ಆ ಹಸುವಿನಲ್ಲಿ ಯಾವ ಗಾಯಗಳಿರಬಾರದು ಮತ್ತು ಆ ಹಸುವು ಎಂದಿಗೂ ನೊಗವನ್ನು ಹೊತ್ತಿರಬಾರದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ಯೆಹೋವನಾದ ನಾನು ಒಂದು ನಿಯಮವನ್ನು ನೇಮಿಸಿದ್ದೇನೆ, ಅದೇನೆಂದರೆ: ಎಂದೂ ನೊಗವನ್ನು ಹೊರದ ಮತ್ತು ಯಾವ ದೋಷವಿಲ್ಲದ ಪೂರ್ಣಾಂಗವಾದ ಕೆಂದಾಕಳನ್ನು ನಿಮಗೆ ತಂದುಕೊಡಬೇಕೆಂದು ಇಸ್ರಾಯೇಲರಿಗೆ ಆಜ್ಞಾಪಿಸು.
Kannada BSI Bible 2016
ಕರ್ತನು ಆಜ್ಞಾಪಿಸಿದ ನ್ಯಾಯಪ್ರಮಾಣದ ಕಟ್ಟಳೆ ಏನಂದರೆ--ಇಸ್ರಾಯೇಲ್ ಮಕ್ಕಳು ನಿನಗೆ ಮಚ್ಚೆ ಇಲ್ಲದಂಥ ನೊಗವನ್ನು ಎಂದೂ ಹೊರದಂಥ ಪೂರ್ಣಾಂಗವಾದ ಕೆಂದಹಸುವನ್ನು ತಂದುಕೊಡುವ ಹಾಗೆ ನೀನು ಅವರ ಸಂಗಡ ಮಾತನಾಡು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೋವನಾದ ನಾನು ಒಂದು ವಿಧಿಯನ್ನು ನೇವಿುಸಿದ್ದೇನೆ; ಅದೇನಂದರೆ - ಎಂದೂ ನೊಗವನ್ನು ಹೊರದ ಮತ್ತು ಯಾವ ಕುಂದು ಕೊರತೆಯೂ ಇಲ್ಲದ ಕೆಂದಾಕಳನ್ನು ನಿನಗೆ ತಂದುಕೊಡಬೇಕೆಂದು ಇಸ್ರಾಯೇಲ್ಯರಿಗೆ ಆಜ್ಞಾಪಿಸು.
Kannada Bible (KNCL) BSI 2016
“ಸರ್ವೇಶ್ವರನಾದ ನಾನು ಒಂದು ವಿಧಿಯನ್ನು ನೇಮಿಸಿದ್ದೇನೆ. ಅದೇನೆಂದರೆ - ಎಂದೂ ನೊಗವನ್ನು ಹೊರದ ಹಾಗೂ ಯಾವ ಕುಂದುಕೊರತೆಯೂ ಇಲ್ಲದ ಒಂದು ಕೆಂದಾಕಳನ್ನು ನಿನಗೆ ತಂದುಕೊಡಬೇಕೆಂದು ಇಸ್ರಯೇಲರಿಗೆ ತಿಳಿಸು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಯೆಹೋವ ದೇವರಾದ ನಾನು ಆಜ್ಞಾಪಿಸಿದ ನಿಯಮದ ಕಟ್ಟಳೆ ಏನೆಂದರೆ, ಎಂದೂ ನೊಗವನ್ನು ಹೊರದಂಥ, ಮಚ್ಚೆ ಇಲ್ಲದಂಥ ಮತ್ತು ಕಳಂಕವಿಲ್ಲದ ಕೆಂದಾಕಳನ್ನು ನಿಮಗೆ ತಂದು ಕೊಡುವಂತೆ ಇಸ್ರಾಯೇಲರಿಗೆ ಹೇಳು.