Numbers 19:20 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅಶುದ್ಧನಾಗಿದ್ದರೂ ತನ್ನನ್ನು ಶುದ್ಧಮಾಡಿಕೊಳ್ಳದವನು ಯೆಹೋವನ ಗುಡಾರವನ್ನು ಅಶುದ್ಧಮಾಡಿದವನಾಗಿರುತ್ತಾನೆ. ಆದ್ದರಿಂದ ಅವನನ್ನು ಇಸ್ರೇಲರಿಂದ ಬಹಿಷ್ಕರಿಸಬೇಕು. ಶುದ್ಧಪಡಿಸಿಕೊಳ್ಳುವ ನೀರನ್ನು ಚಿಮಿಕಿಸಿಕೊಳ್ಳದೆ ಹೋದದರಿಂದ ಅವನು ಅಶುದ್ಧನೇ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅಶುದ್ಧನಾಗಿ ದೋಷಪರಿಹಾರ ಮಾಡಿಕೊಳ್ಳದವನು ಯೆಹೋವನ ಆಲಯವನ್ನು ಅಪವಿತ್ರಪಡಿಸಿದ ಕಾರಣ ಸಭೆಯಿಂದ ತೆಗೆಯಲ್ಪಡಬೇಕು. ಶುದ್ಧೀಕರಣದ ನೀರನ್ನು ತನ್ನ ಮೇಲೆ ಚಿಮಿಕಿಸಿಕೊಳ್ಳದೆ ಹೋದುದರಿಂದ ಅವನು ಅಶುದ್ಧನಾಗುವನು.
Kannada BSI Bible 2016
ಆದರೆ ಅಪವಿತ್ರನಾಗಿದ್ದು ತನ್ನನ್ನು ಶುದ್ಧಪಡಿಸಿ ಕೊಳ್ಳದವನು ಸಭೆಯ ಮಧ್ಯದಿಂದ ತೆಗೆದು ಹಾಕಲ್ಪ ಡಲಿ; ಅವನು ಕರ್ತನ ಪರಿಶುದ್ಧ ಸ್ಥಳವನ್ನು ಅಪವಿತ್ರ ಮಾಡಿದ್ದಾನೆ; ಪ್ರತ್ಯೇಕಿಸಲ್ಪಟ್ಟ ನೀರು ಅವನ ಮೇಲೆ ಚಿಮುಕಿಸಲ್ಪಡಲಿಲ್ಲ; ಅವನು ಅಪವಿತ್ರನೇ.
Kannada BSI JV (ಕನ್ನಡ ಸತ್ಯವೇದವು J.V. (BSI))
ಅಶುದ್ಧನಾಗಿ ದೋಷಪರಿಹಾರಮಾಡಿಕೊಳ್ಳದವನು ಯೆಹೋವನ ದೇವಸ್ಥಾನವನ್ನು ಅಪವಿತ್ರಪಡಿಸಿದ ಕಾರಣ ಸಭೆಯಿಂದ ತೆಗೆಯಲ್ಪಡಬೇಕು. ಹೊಲೆಗಳೆವ ನೀರನ್ನು ತನ್ನ ಮೇಲೆ ಚಿವಿುಕಿಸಿಕೊಳ್ಳದೆ ಹೋದದರಿಂದ ಅವನು ಅಶುದ್ಧನೇ.
Kannada Bible (KNCL) BSI 2016
ಮಡಿಗೆಟ್ಟು ದೋಷಪರಿಹಾರ ಮಾಡಿಕೊಳ್ಳದವನು ಸರ್ವೇಶ್ವರನ ದೇವಸ್ಥಾನವನ್ನು ಅಪವಿತ್ರಗೊಳಿಸುತ್ತಾನೆ. ಆದಕಾರಣ ಅಂಥವನಿಗೆ ಸಭೆಯಿಂದ ಬಹಿಷ್ಕಾರ ಹಾಕಬೇಕು. ಶುದ್ಧೀಕರಣ ಜಲವನ್ನು ತನ್ನ ಮೇಲೆ ಚಿಮುಕಿಸಿಕೊಳ್ಳದೆ ಹೋದುದರಿಂದ ಅವನು ಮಡಿಗೆಟ್ಟವನಾಗಿಯೇ ಇರುತ್ತಾನೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಅಪವಿತ್ರನಾಗಿದ್ದು, ತನ್ನನ್ನು ಶುದ್ಧಪಡಿಸಿಕೊಳ್ಳದವನು ಸಭೆಯ ಮಧ್ಯದಿಂದ ತೆಗೆದುಹಾಕಬೇಕು ಏಕೆಂದರೆ ಅವನು ಯೆಹೋವ ದೇವರ ಪರಿಶುದ್ಧ ಸ್ಥಳವನ್ನು ಅಪವಿತ್ರ ಮಾಡಿದ್ದಾನೆ. ನೀರು ಅವನ ಮೇಲೆ ಚಿಮಿಕಿಸಿಕೊಳ್ಳದ ಕಾರಣ ಅವನು ಅಪವಿತ್ರನೇ.