Numbers 19:21 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಇದು ನಿಮಗೆ ಶಾಶ್ವತನಿಯಮ. ಶುದ್ಧಪಡಿಸುವ ಆ ನೀರನ್ನು ಚಿಮಿಕಿಸಿದವನು ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು; ಮತ್ತು ಆ ನೀರನ್ನು ಯಾವನಾದರೂ ಮುಟ್ಟಿದರೆ, ಅವನು ಆ ದಿನದ ಸಾಯಂಕಾಲದವರೆಗೆ ಅಶುದ್ಧನಾಗಿರುವನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ಇದು ಇಸ್ರಾಯೇಲರಿಗೆ ಶಾಶ್ವತ ನಿಯಮವಾಗಿರುವುದು. ಶುದ್ಧೀಕರಣದ ಆ ನೀರನ್ನು ಚಿಮಿಕಿಸಿದವನು ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು ಮತ್ತು ಆ ನೀರು ಯಾರಿಗೆ ಸೋಂಕುವುದೋ ಅವನು ಆ ದಿನದ ಸಾಯಂಕಾಲದವರೆಗೆ ಅಶುದ್ಧನಾಗಿರಬೇಕು.
Kannada BSI Bible 2016
ಇದು ಅವರಿಗೆ ನಿತ್ಯ ಕಟ್ಟಳೆಯಾಗಿರಬೇಕು; ಪ್ರತ್ಯೇಕಿಸಲ್ಪಟ್ಟ ನೀರನ್ನು ಚಿಮುಕಿಸುವವನು ತನ್ನ ವಸ್ತ್ರ ಗಳನ್ನು ಒಗೆಯಬೇಕು; ಪ್ರತ್ಯೇಕಿಸಲ್ಪಟ್ಟ ನೀರನ್ನು ಮುಟ್ಟಿದವನು ಸಾಯಂಕಾಲದ ವರೆಗೆ ಅಪವಿತ್ರನಾಗಿರ ಬೇಕು.ಇದಲ್ಲದೆ ಅಪವಿತ್ರನಾದವನು ಮುಟ್ಟು ವಂಥದ್ದೆಲ್ಲಾ ಅಪವಿತ್ರವಾಗುವದು; ಅವನನ್ನು ಮುಟ್ಟಿ ದವನು ಸಾಯಂಕಾಲದ ವರೆಗೆ ಅಪವಿತ್ರನಾಗಿರಬೇಕು ಎಂದು ಹೇಳಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇದು ಇಸ್ರಾಯೇಲ್ಯರಿಗೆ ಶಾಶ್ವತನಿಯಮ. ಹೊಲೆಗಳೆವ ಆ ನೀರನ್ನು ಚಿವಿುಕಿಸಿದವನು ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು; ಮತ್ತು ಆ ನೀರು ಯಾರಿಗೆ ಸೋಂಕಿತೋ ಅವನು ಆ ದಿನದ ಸಾಯಂಕಾಲದವರೆಗೆ ಅಶುದ್ಧನಾಗಿರಬೇಕು.
Kannada Bible (KNCL) BSI 2016
“ಇದು ಇಸ್ರಯೇಲರಿಗೆ ಶಾಶ್ವತ ನಿಯಮವಾಗಿರುತ್ತದೆ. ಮೈಲಿಗೆ ನೀಗಿಸುವ ಆ ನೀರನ್ನು ಚಿಮುಕಿಸಿದವನು ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು. ಆ ನೀರನ್ನು ಮುಟ್ಟಿದವನು ಆ ದಿನದ ಸಂಜೆಯವರೆಗೂ ಮಡಿಗೆಟ್ಟವನಾಗಿರುವನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದು ಅವರಿಗೆ ಶಾಶ್ವತ ಕಟ್ಟಳೆಯಾಗಿರಬೇಕು. “ಶುದ್ಧೀಕರಣದ ನೀರನ್ನು ಚಿಮುಕಿಸುವವನು ತನ್ನ ವಸ್ತ್ರಗಳನ್ನು ತೊಳೆದುಕೊಳ್ಳಬೇಕು ಮತ್ತು ಆ ನೀರು ಯಾರಿಗೆ ಸೋಂಕುವುದೋ ಅವನು ಆ ದಿನದ ಸಂಜೆಯವರೆಗೆ ಅಪವಿತ್ರನಾಗಿರುವನು.