Numbers 21:6 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆದ್ದರಿಂದ ಯೆಹೋವನು ಅವರ ಮಧ್ಯದಲ್ಲಿ ವಿಷಕರವಾದ ಹಾವುಗಳನ್ನು ಕಳುಹಿಸಿದನು. ಅವುಗಳು ಅವರನ್ನು ಕಚ್ಚಿದ್ದರಿಂದ ಅನೇಕ ಇಸ್ರೇಲರು ಸತ್ತರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದಕ್ಕೆ ಯೆಹೋವನು ವಿಷಸರ್ಪಗಳನ್ನು ಇಸ್ರಾಯೇಲ್ ಜನರೊಳಗೆ ಬರಮಾಡಿದನು. ಅವು ಜನರನ್ನು ಕಚ್ಚಿದ್ದರಿಂದ ಬಹಳಜನರು ಸತ್ತುಹೋದರು.
Kannada BSI Bible 2016
ಆಗ ಕರ್ತನು ಜನರೊಳಗೆ ಉರಿ ಸರ್ಪ ಗಳನ್ನು ಕಳುಹಿಸಿದನು; ಅವು ಜನರನ್ನು ಕಚ್ಚಿದ್ದರಿಂದ ಇಸ್ರಾಯೇಲ್ಯರಲ್ಲಿ ಬಹು ಜನರು ಸತ್ತುಹೋದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅದಕ್ಕೆ ಯೆಹೋವನು ಉರಿಮಂಡಲಗಳನ್ನು ಜನರೊಳಗೆ ಬರಮಾಡಿದನು; ಅವು ಜನರನ್ನು ಕಚ್ಚಿದ್ದರಿಂದ ಬಹುಜನ ಸತ್ತುಹೋದರು.
Kannada Bible (KNCL) BSI 2016
ಅದಕ್ಕೆ ಸರ್ವೇಶ್ವರ ವಿಷಸರ್ಪಗಳನ್ನು ಅವರ ನಡುವೆ ಬರಮಾಡಿದರು. ಅವು ಆ ಜನರನ್ನು ಕಚ್ಚಿದವು. ಬಹುಜನ ಸತ್ತುಹೋದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಯೆಹೋವ ದೇವರು ಜನರೊಳಗೆ ವಿಷಸರ್ಪಗಳನ್ನು ಕಳುಹಿಸಿದರು. ಅವು ಜನರನ್ನು ಕಚ್ಚಿದ್ದರಿಂದ, ಇಸ್ರಾಯೇಲರಲ್ಲಿ ಬಹುಜನರು ಸತ್ತುಹೋದರು.