Numbers 22:37 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಬಾಲಾಕನು ಬಿಳಾಮನನ್ನು ಕಂಡಾಗ, “ನಿನ್ನನ್ನು ಅವಸರದಿಂದ ಕರೆಸುವುದಕ್ಕೆ ದೂತರನ್ನು ಕಳುಹಿಸಿದೆನಲ್ಲಾ. ನೀನು ಆಗಲೇ ಯಾಕೆ ಬರಲಿಲ್ಲ? ನಿನ್ನನ್ನು ಘನಪಡಿಸುವುದಕ್ಕೆ ನಾನು ಸಮರ್ಥನಲ್ಲವೆಂದು ನೀನು ಭಾವಿಸಿಕೊಂಡಿರುವಿಯಾ?” ಎಂದು ಕೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಬಾಲಾಕನು ಬಿಳಾಮನನ್ನು ಕಂಡಾಗ, “ನಿನ್ನನ್ನು ಅವಸರದಿಂದ ಕರೆಯುವುದಕ್ಕೆ ದೂತರನ್ನು ಕಳುಹಿಸಿದೆನಲ್ಲಾ? ನೀನು ಏಕೆ ಆಗಲೇ ಬರಲಿಲ್ಲ? ನಿನ್ನನ್ನು ಘನಪಡಿಸುವುದಕ್ಕೆ ನಾನು ಸಮರ್ಥನಲ್ಲವೆಂದು ಭಾವಿಸುತ್ತೀಯೋ?” ಎಂದನು.
Kannada BSI Bible 2016
ಬಾಲಾಕನು ಬಿಳಾಮನಿಗೆ ಹೇಳಿದ್ದೇ ನಂದರೆ--ನಾನು ನಿನ್ನನ್ನು ತೀವ್ರವಾಗಿ ಕರೇ ಕಳುಹಿಸ ಲಿಲ್ಲವೋ? ನೀನು ನನ್ನ ಬಳಿಗೆ ಯಾಕೆ ಬರಲಿಲ್ಲ? ನಾನು ನಿನ್ನನ್ನು ಘನಪಡಿಸಲು ನಿಶ್ಚಯವಾಗಿ ಸಾಮರ್ಥ್ಯ ವುಳ್ಳವನಲ್ಲವೋ?
Kannada BSI JV (ಕನ್ನಡ ಸತ್ಯವೇದವು J.V. (BSI))
ಬಾಲಾಕನು ಬಿಳಾಮನನ್ನು ಕಂಡಾಗ - ನಿನ್ನನ್ನು ಅವಸರದಿಂದ ಕರಿಸುವದಕ್ಕೆ ದೂತರನ್ನು ಕಳುಹಿಸಿದೆನಲ್ಲಾ; ನೀನು ಯಾಕೆ ಆಗಲೇ ಬರಲಿಲ್ಲ; ನಿನ್ನನ್ನು ಘನಪಡಿಸುವದಕ್ಕೆ ನಾನು ಸಮರ್ಥನಲ್ಲವೆಂದು ಭಾವಿಸುತ್ತೀಯೋ? ಎಂದು ಹೇಳಿದ್ದಕ್ಕೆ
Kannada Bible (KNCL) BSI 2016
ಅಲ್ಲಿ ಬಿಳಾಮನನ್ನು ಕಂಡು, “ತಮ್ಮನ್ನು ತುರ್ತಾಗಿ ಕರೆದುತರಲು ನಾನು ದೂತರನ್ನು ಕಳಿಸಿದೆನಲ್ಲವೆ? ತಾವೇಕೆ ಆಗಲೇ ಬರಲಿಲ್ಲ? ತಮಗೆ ಯೋಗ್ಯವಾದ ಸತ್ಕಾರ್ಯ ನೀಡಲು ನಾನು ಅಸಮರ್ಥನೇ?” ಎಂದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಬಾಲಾಕನು ಬಿಳಾಮನಿಗೆ, “ನಾನು ನಿನಗೆ ತುರ್ತಾಗಿ ಬರುವಂತೆ ಹೇಳಿ ಕಳುಹಿಸಲಿಲ್ಲವೋ? ನೀನು ನನ್ನ ಬಳಿಗೆ ಏಕೆ ಬರಲಿಲ್ಲ? ನಾನು ನಿನ್ನನ್ನು ಘನಪಡಿಸಲು ನಿಶ್ಚಯವಾಗಿ ಸಾಮರ್ಥ್ಯವುಳ್ಳವನಲ್ಲವೋ?” ಎಂದನು.