Numbers 22:5 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಬೆಯೋರನ ಮಗನಾದ ಬಿಳಾಮನನ್ನು ಕರೆಸುವುದಕ್ಕೆ ಕೆಲವು ಸಂದೇಶಕರನ್ನು ಕಳುಹಿಸಿದನು. ಬಿಳಾಮನು ಯೂಫ್ರೆಟೀಸ್ ನದಿಯ ಬಳಿ “ಪೆತೋರ್” ಎಂಬ ಸ್ಥಳದಲ್ಲಿದ್ದನು. ಬಿಳಾಮನ ಜನರು ಇಲ್ಲಿ ವಾಸಿಸುತ್ತಿದ್ದರು. ಬಾಲಾಕನು ತನ್ನ ಸಂದೇಶಕರನ್ನು ಕಳುಹಿಸಿ ಬಿಳಾಮನಿಗೆ, “ಒಂದು ಜನಾಂಗವು ಈಜಿಪ್ಟಿನಿಂದ ಬಂದಿದೆ. ಅವರು ದೇಶವನ್ನೆಲ್ಲಾ ಮುಚ್ಚಿಕೊಂಡು ನನ್ನ ಪಕ್ಕದಲ್ಲಿ ನೆಲೆಸಿದ್ದಾರೆ. ಅವರು ನಮಗಿಂತ ಬಲಿಷ್ಠರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವನು ಬೆಯೋರನ ಮಗನಾದ ಬಿಳಾಮನನ್ನು ಕರೆಯಿಸುವುದಕ್ಕೆ ಸ್ವಜನರ ದೇಶವಾದ ಯೂಫ್ರೆಟಿಸ್ ನದಿಯ ತೀರದಲ್ಲಿರುವ ಪೆತೋರ್ ಎಂಬ ಊರಿಗೆ ದೂತರನ್ನು ಕಳುಹಿಸಿ ಅವನಿಗೆ, “ಒಂದು ಜನಾಂಗವು ಐಗುಪ್ತ ದೇಶದಿಂದ ಬಂದಿದೆ. ಅವರು ಭೂಮಿಯನ್ನೆಲ್ಲಾ ಆವರಿಸಿಕೊಂಡು ನನ್ನ ಸಮೀಪಕ್ಕೆ ಬಂದಿದ್ದಾರೆ.
Kannada BSI Bible 2016
ಇವನು ತನ್ನ ಜನರ ಮಕ್ಕಳ ದೇಶದ ನದಿತೀರದಲ್ಲಿರುವ ಪೆತೋರಿಗೆ ದೂತರನ್ನು ಕಳುಹಿಸಿ ಬೆಯೋರನ ಮಗನಾದ ಬಿಳಾಮನನ್ನು ಕರೆಯಿಸಿ ಹೇಳಿದ್ದೇನಂದರೆ--ಇಗೋ, ಒಂದು ಜನಾಂಗವು ಐಗುಪ್ತದಿಂದ ಹೊರಟಿತು; ಇಗೋ, ಅದು ಭೂಮುಖವನ್ನು ಮುಚ್ಚಿ ನನಗೆದುರಾಗಿ ವಾಸಿಸುತ್ತದೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನು ಬೆಯೋರನ ಮಗನಾದ ಬಿಳಾಮನನ್ನು ಕರಿಸುವದಕ್ಕೆ ಸ್ವಜನರ ದೇಶಕ್ಕೆ ಯೂಫ್ರೇಟೀಸ್ ನದಿಯ ತೀರದಲ್ಲಿರುವ ಪೆತೋರೂರಿಗೆ ದೂತರನ್ನು ಕಳುಹಿಸಿ ಅವನಿಗೆ - ಚಿತ್ತೈಸಬೇಕು; ಒಂದು ಜನಾಂಗವು ಐಗುಪ್ತದೇಶದಿಂದ ಬಂದಿದೆ; ಅವರು ನೆಲವನ್ನೆಲ್ಲಾ ಮುಚ್ಚಿಕೊಂಡು ನನಗೆದುರಾಗಿ ಇಳಿದಿದ್ದಾರೆ; ಅವರು ನಮಗಿಂತ ಬಲಿಷ್ಠರು.
Kannada Bible (KNCL) BSI 2016
ಬಾಲಾಕನು ಬೆಯೋರನ ಮಗ ಬಿಳಾಮನನ್ನು ಕರೆಸುವುದಕ್ಕೆ ಸ್ವಜನರ ನಾಡಾದ ಯೂಫ್ರೆಟಿಸ್ ನದಿಯ ತೀರದಲ್ಲಿರುವ ‘ಪೆತೋರ್’ ಎಂಬ ಊರಿಗೆ ದೂತರನ್ನು ಕಳಿಸಿದನು. “ತಾವು ದಯವಿಟ್ಟು ಬರಬೇಕು. ಯಾವುದೋ ಒಂದು ಜನಾಂಗ ಈಜಿಪ್ಟ್ ದೇಶದಿಂದ ಬಂದಿದೆ; ಭೂಮಿಯನ್ನೆಲ್ಲಾ ಆವರಿಸಿಕೊಂಡಿದೆ; ನನಗೆದುರಾಗಿ ಬಂದಿಳಿದಿದೆ. ಅವರು ನಮಗಿಂತ ಬಲಿಷ್ಠರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇವನು ಸ್ವಜನರ ನಾಡಾದ ಯೂಫ್ರೇಟೀಸ್ ನದಿಯ ತೀರದಲ್ಲಿರುವ ಪೆತೋರೂರಿಗೆ ದೂತರನ್ನು ಕಳುಹಿಸಿ, ಬೆಯೋರನ ಮಗ ಬಿಳಾಮನನ್ನೂ ಕರೆಯಿಸಿ, “ಒಂದು ಜನಾಂಗವು ಈಜಿಪ್ಟಿನಿಂದ ಹೊರಟು ಬಂದಿದೆ. ಅದು ದೇಶವನ್ನೆಲ್ಲಾ ಆವರಿಸಿಕೊಂಡು, ನನಗೆದುರಾಗಿ ವಾಸಿಸುತ್ತಿದೆ.