Numbers 24:7 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಿಮಗೆ ಯಾವಾಗಲೂ ಬೇಕಾದಷ್ಟು ನೀರು ಇರುವುದು; ನೀವು ಬಿತ್ತಿದ ಬೀಜಗಳು ಬೆಳೆಯಲು ಸಾಕಷ್ಟು ನೀರು ಇರುವುದು. ನಿಮ್ಮ ಅರಸನು ಆಗಾಗ್ ಎಂಬವನಿಗಿಂತಲೂ ದೊಡ್ಡವನಾಗಿದ್ದಾನೆ. ನಿಮ್ಮ ರಾಜ್ಯವು ಬಹಳ ಬಲಿಷ್ಠವಾಗಿರುವುದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ತನ್ನ ತೊಟ್ಟಿಗಳಿಂದ ನೀರು ಹರಿಯುತ್ತಲೇ ಇದೆ, ಅವರ ಬಿತ್ತನೆಗೆ ಬೇಕಾದಷ್ಟು ನೀರು ಇರುವುದು. ಅವರ ಅರಸನು ಅಗಾಗ್ ರಾಜನಿಗಿಂತಲೂ ದೊಡ್ಡವನಾಗಿರುವನು. ಅವರ ರಾಜ್ಯವು ಅಭಿವೃದ್ಧಿಯಲ್ಲಿರುವುದು.
Kannada BSI Bible 2016
ತನ್ನ ತೊಟ್ಟಿಗಳಿಂದ ನೀರು ಹರಿಯಮಾಡುವನು; ಅವನ ಸಂತತಿಯೂ ಅನೇಕ ಜಲಗಳಲ್ಲಿ ಇರುವದು; ಅವನ ಅರಸನು ಅಗಾಗನಿಗಿಂತ ಉನ್ನತವಾಗಿರುವನು; ಅವನ ರಾಜ್ಯವು ಘನತೆಗೇರಿರುವದು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರ ಕಪಿಲೆಗಳಿಂದ ನೀರು ಹರಿಯುತ್ತಲೇ ಇದೆ; ಅವರ ಬಿತ್ತನೆಗೆ ಬೇಕಾದಷ್ಟು ನೀರಿದೆ. ಅವರ ಅರಸನು ಅಗಾಗ್ ರಾಜನಿಗಿಂತಲೂ ದೊಡ್ಡವನಾಗಿರುವನು; ಅವರ ರಾಜ್ಯವು ಅಭಿವೃದ್ಧಿಯಲ್ಲಿರುವದು.
Kannada Bible (KNCL) BSI 2016
ನೀರು ಹರಿಯುತ್ತಲೇ ಇದೆ ಅವರ ಕಪಿಲೆಗಳಿಂದ ಅವರ ಬಿತ್ತನೆಗೆ ನೀರಿನ ಕೊರತೆಯೆಂಬುದಿಲ್ಲ. ಅಗಾಗ್ ರಾಜನಿಗಿಂತ ಶ್ರೇಷ್ಠ ಅವರ ಅರಸ ಅಭಿವೃದ್ಧಿಯಾಗುತ್ತಿದೆ ಅವರ ರಾಜ್ಯ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರ ತೊಟ್ಟಿಗಳಿಂದ ನೀರು ಹರಿಯುವಂತೆ ಮಾಡುವರು. ಅವರ ಬಿತ್ತನೆಗೆ ಬೇಕಾದಷ್ಟು ನೀರು ಇರುವುದು. “ಅವರ ಅರಸನು ಅಗಾಗ್ ರಾಜನಿಗಿಂತಲೂ ಉನ್ನತವಾಗಿರುವನು. ಅವರ ರಾಜ್ಯವು ಅಭಿವೃದ್ಧಿ ಹೊಂದುವುದು.