Numbers 26:2 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ನೀವು ಇಸ್ರೇಲರ ಸರ್ವಸಮೂಹದವರಲ್ಲಿ ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಾದ ವಯಸುಳ್ಳವರನ್ನು ಮತ್ತು ಇಸ್ರೇಲ್ ಸೈನ್ಯದಲ್ಲಿ ಸೇವೆಮಾಡಲು ಶಕ್ತರಾಗಿರುವ ಗಂಡಸರನ್ನು ಕುಟುಂಬ ಕುಟುಂಬಗಳ ಪ್ರಕಾರ ಲೆಕ್ಕಿಸಬೇಕು” ಎಂದು ಆಜ್ಞಾಪಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ನೀವು ಇಸ್ರಾಯೇಲರ ಸರ್ವಸಮೂಹದವರಲ್ಲಿ ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಿನ ವಯಸ್ಸುಳ್ಳವರನ್ನು ಅಂದರೆ ಯುದ್ಧಕ್ಕೆ ಹೊರಡತಕ್ಕವರನ್ನು ಗೋತ್ರಗೋತ್ರಗಳ ಪ್ರಕಾರ ಲೆಕ್ಕಿಸಬೇಕು” ಎಂದು ಆಜ್ಞಾಪಿಸಿದನು.
Kannada BSI Bible 2016
ಇಸ್ರಾಯೇಲ್‌ ಮಕ್ಕಳ ಸಮಸ್ತ ಸಭೆಯ ಲೆಕ್ಕವನ್ನು ಇಪ್ಪತ್ತು ವರುಷವೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಇಸ್ರಾಯೇಲ್ಯರಲ್ಲಿ ಯುದ್ಧಕ್ಕೆ ಹೋಗುವದಕ್ಕೆ ಶಕ್ತರಾದವರೆಲ್ಲರ ಲೆಕ್ಕವನ್ನು ಅವರ ತಂದೆಯ ಮನೆಗಳ ಪ್ರಕಾರ ತಕ್ಕೊಳ್ಳಿರಿ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀವು ಇಸ್ರಾಯೇಲ್ಯರ ಸರ್ವಸಮೂಹದವರಲ್ಲಿ ಇಪ್ಪತ್ತು ವರುಷ ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳವರನ್ನು ಅಂದರೆ ಯುದ್ಧಕ್ಕೆ ಹೊರಡತಕ್ಕವರನ್ನು ಗೋತ್ರಗೋತ್ರಗಳ ಪ್ರಕಾರ ಲೆಕ್ಕಿಸಬೇಕೆಂದು ಆಜ್ಞಾಪಿಸಿದನು.
Kannada Bible (KNCL) BSI 2016
“ನೀವು ಇಸ್ರಯೇಲ ಸಮಾಜದವರಲ್ಲಿ ಇಪ್ಪತ್ತು ವರ್ಷ ಮತ್ತು ಮೇಲ್ಪಟ್ಟ ವಯಸ್ಸುಳ್ಳವರನ್ನು ಅಂದರೆ ಸೈನಿಕಸೇವೆಗೆ ಅರ್ಹರಾದವರನ್ನು ಗೋತ್ರ ಗೋತ್ರಗಳ ಪ್ರಕಾರ ಜನಗಣತಿ ಮಾಡಿ,” ಎಂದು ಹೇಳಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಇಸ್ರಾಯೇಲರ ಸಮಸ್ತ ಸಮೂಹದವರಲ್ಲಿ ಇಪ್ಪತ್ತು ವರ್ಷವೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರನ್ನು ಯುದ್ಧಕ್ಕೆ ಹೋಗುವುದಕ್ಕೆ ಶಕ್ತರಾದವರೆಲ್ಲರನ್ನು ಜನಗಣತಿ ಮಾಡಿ ಅವರ ಗೋತ್ರಗಳ ಪ್ರಕಾರ ತೆಗೆದುಕೊಳ್ಳಿರಿ,” ಎಂದರು.