Numbers 26:57 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಲೇವಿಯರೊಳಗಿನ ಕುಲಗಳನ್ನು ಲೆಕ್ಕಿಸಲಾಗಿ, ಅವರಲ್ಲಿನ ಕುಟುಂಬಗಳು: ಗೇರ್ಷೋನನ ಕುಟುಂಬದವರಾದ ಗೇರ್ಷೋನ್ಯರು; ಕೆಹಾತನ ಕುಟುಂಬದವರಾದ ಕೆಹಾತ್ಯರು; ಮೆರಾರೀಯ ಕುಟುಂಬದವರಾದ ಮೆರಾರೀಯರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಲೇವಿಯರೊಳಗೆ ಲೆಕ್ಕಿಸಲ್ಪಟ್ಟ ಕುಟುಂಬಗಳು: ಗೇರ್ಷೋನನ ವಂಶದವರಾದ ಗೇರ್ಷೋನ್ಯರು, ಕೆಹಾತನ ವಂಶದವರಾದ ಕೆಹಾತ್ಯರು, ಮೆರಾರೀಯ ವಂಶದವರಾದ ಮೆರಾರೀಯರು.
Kannada BSI Bible 2016
ಲೇವಿಯರಲ್ಲಿ ಕುಟುಂಬಗಳ ಪ್ರಕಾರ ಎಣಿಸಲ್ಪ ಟ್ಟವರು ಇವರೇ. ಗೆರ್ಷೋನನಿಂದ ಗೆರ್ಷೋನ್ಯರ ಕುಟುಂಬ; ಕೆಹಾತನಿಂದ ಕೆಹಾತ್ಯರ ಕುಟುಂಬ; ಮೆರಾರೀಯಿಂದ ಮೆರಾರೀಯರ ಕುಟುಂಬ.
Kannada BSI JV (ಕನ್ನಡ ಸತ್ಯವೇದವು J.V. (BSI))
ಲೇವಿಯರೊಳಗೆ ಲೆಕ್ಕಿಸಲ್ಪಟ್ಟ ಕುಟುಂಬಗಳು - ಗೇರ್ಷೋನನ ವಂಶದವರಾದ ಗೇರ್ಷೋನ್ಯರು, ಕೆಹಾತನ ವಂಶದವರಾದ ಕೆಹಾತ್ಯರು, ಮೆರಾರೀಯ ವಂಶದವರಾದ ಮೆರಾರೀಯರು.
Kannada Bible (KNCL) BSI 2016
ಲೇವಿಯರಲ್ಲಿ ಎಣಿಕೆಯಾದ ಕುಟುಂಬಗಳು ಇವು: ಗೇರ್ಷೋನನಿಂದ ಗೇರ್ಷೋನ್ಯರು, ಕೆಹಾತನಿಂದ ಕೆಹಾತ್ಯರು ಮತ್ತು ಮೆರಾರೀಯನಿಂದ ಮೆರಾರೀಯರು, ಎಂಬ ವಂಶಸ್ಥರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಲೇವಿಯರಲ್ಲಿ ಕುಟುಂಬಗಳ ಪ್ರಕಾರ ಎಣಿಕೆಯಾದವರು ಇವರೇ. ಗೇರ್ಷೋನನ ವಂಶದವರಾದ ಗೇರ್ಷೋನ್ಯರು, ಕೊಹಾತನಿಂದ ಕೊಹಾತ್ಯರ ಕುಟುಂಬ; ಮೆರಾರೀಯಿಂದ ಮೆರಾರೀಯರ ಕುಟುಂಬ.