Numbers 27:4 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಮ್ಮ ತಂದೆಗೆ ಗಂಡುಮಗನಿಲ್ಲದ ಮಾತ್ರದಿಂದ ಅವನ ಹೆಸರನ್ನು ಅವನ ಕುಲದವರ ಮಧ್ಯದಿಂದ ತೆಗೆಯುವುದು ನ್ಯಾಯವೋ? ನಮ್ಮ ತಂದೆಯ ಸಂಬಂಧಿಕರೊಡನೆ ನಮಗೂ ಸ್ವಾಸ್ತ್ಯವನ್ನು ಕೊಡು” ಎಂದು ಹೇಳಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಮ್ಮ ತಂದೆಗೆ ಗಂಡು ಮಗನಿಲ್ಲದ ಕಾರಣದಿಂದ ಅವನ ಹೆಸರು ಕುಲದಿಂದ ತೆಗೆದು ಹಾಕುವುದು ನ್ಯಾಯವೋ? ತಂದೆಯ ಕುಲದವರೊಂದಿಗೆ ನಮಗೂ ಸ್ವತ್ತನ್ನು ಕೊಡಬೇಕು” ಎಂದು ಕೇಳಿಕೊಂಡರು.
Kannada BSI Bible 2016
ಹಾಗಾದರೆ ನಮ್ಮ ತಂದೆಗೆ ಮಗನಿಲ್ಲದಿರುವ ದರಿಂದ ಅವನ ಹೆಸರನ್ನು ತನ್ನ ಕುಟುಂಬದಿಂದ ಯಾಕೆ ತೆಗೆಯಬೇಕು? ನೀನು ನಮ್ಮ ತಂದೆಯ ಸಹೋದರರ ಮಧ್ಯದಲ್ಲಿ ಒಂದು ಸ್ವಾಸ್ತ್ಯವನ್ನು ನಮಗೆ ಕೊಡು ಎಂದು ಹೇಳಿದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಮ್ಮ ತಂದೆಗೆ ಗಂಡುಮಗನಿಲ್ಲದ ಮಾತ್ರದಿಂದ ಅವನ ಹೆಸರು ಕುಲದಿಂದ ತೆಗೆಯಲ್ಪಡುವದು ನ್ಯಾಯವೋ? ತಂದೆಯ ಕುಲದವರೊಂದಿಗೆ ನಮಗೂ ಸ್ವಾಸ್ತ್ಯವನ್ನು ಕೊಡಬೇಕೆಂದು ಕೇಳಿಕೊಂಡರು.
Kannada Bible (KNCL) BSI 2016
ನಮ್ಮ ತಂದೆಗೆ ಗಂಡುಮಗನಿಲ್ಲದ ಮಾತ್ರಕ್ಕೆ ಅವರ ಹೆಸರನ್ನು ಕುಲದಿಂದ ತೆಗೆದುಹಾಕುವುದು ನ್ಯಾಯವೇ? ನಮ್ಮ ತಂದೆಯ ಸ್ವಂತದವರಲ್ಲಿ ನಮಗೂ ಸೊತ್ತನ್ನು ಕೊಡಿ,” ಎಂದು ಕೇಳಿಕೊಂಡರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಹಾಗಾದರೆ ನಮ್ಮ ತಂದೆಗೆ ಮಗನಿಲ್ಲದಿರುವುದರಿಂದ, ಅವನ ಹೆಸರನ್ನು ತನ್ನ ಕುಟುಂಬದಿಂದ ಏಕೆ ತೆಗೆಯಬೇಕು? ನೀನು ನಮ್ಮ ತಂದೆಯ ಸಹೋದರರ ಮಧ್ಯದಲ್ಲಿ ಒಂದು ಸೊತ್ತನ್ನು ನಮಗೆ ಕೊಡು,” ಎಂದರು.