Numbers 29:12 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ಏಳನೆಯ ತಿಂಗಳಿನ ಹದಿನೈದನೆಯ ದಿನದಲ್ಲಿ ವಿಶೇಷ ಸಭೆ ಸೇರಬೇಕು. ಇದು ಪರ್ಣಶಾಲೆಗಳ ಹಬ್ಬವಾಗಿದೆ. ಆ ದಿವಸ ನೀವು ಯಾವ ಪ್ರಯಾಸದ ಕೆಲಸವನ್ನೂ ಮಾಡಬಾರದು. ಯೆಹೋವನಿಗೆ ಗೌರವಾರ್ಥವಾಗಿ “ಪರ್ಣಶಾಲೆಗಳ ಹಬ್ಬ” ವನ್ನು ನೀವು ಏಳು ದಿನಗಳವರೆಗೆ ಆಚರಿಸಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“‘ಏಳನೆಯ ತಿಂಗಳಿನ ಹದಿನೈದನೆಯ ದಿನದಲ್ಲಿ ದೇವಾರಾಧನೆಗಾಗಿ ಸಭೆಕೂಡಬೇಕು. ನೀವು ಆ ದಿನದಲ್ಲಿ ಯಾವ ಉದ್ಯೋಗವನ್ನೂ ನಡೆಸಬಾರದು. ಆ ದಿನ ಮೊದಲುಗೊಂಡು ಏಳು ದಿನಗಳವರೆಗೆ ಯೆಹೋವನಿಗೆ ಉತ್ಸವವನ್ನು ಆಚರಿಸಬೇಕು.
Kannada BSI Bible 2016
ಏಳನೇ ತಿಂಗಳಿನ ಹದಿನೈದನೇ ದಿವಸದಲ್ಲಿ ನೀವು ಪರಿಶುದ್ಧ ಸಭೆಯಾಗಿ ಕೂಡಬೇಕು; ಕಷ್ಟಕರವಾದ ಕೆಲಸವನ್ನು ಮಾಡಬಾರದು.
Kannada BSI JV (ಕನ್ನಡ ಸತ್ಯವೇದವು J.V. (BSI))
ಏಳನೆಯ ತಿಂಗಳಿನ ಹದಿನೈದನೆಯ ದಿನದಲ್ಲಿ ದೇವಾರಾಧನೆಗಾಗಿ ಸಭೆಕೂಡಬೇಕು. ನೀವು ಅದರಲ್ಲಿ ಯಾವ ಉದ್ಯೋಗವನ್ನೂ ನಡಿಸಕೂಡದು. ಆ ದಿನ ಮೊದಲುಗೊಂಡು ಏಳು ದಿನಗಳವರೆಗೆ ಯೆಹೋವನಿಗೆ ಉತ್ಸವವನ್ನು ಆಚರಿಸಬೇಕು.
Kannada Bible (KNCL) BSI 2016
‘ಏಳನೆಯ ತಿಂಗಳಿನ ಹದಿನಾಲ್ಕನೆಯ ದಿನ ದೇವಾರಾಧನೆಗಾಗಿ ಸಭೆ ಕೂಡಬೇಕು. ನೀವು ಆ ದಿನದಂದು ಯಾವ ದುಡಿಮೆಯನ್ನೂ ಮಾಡಕೂಡದು. ಆ ದಿನ ಮೊದಲುಗೊಂಡು ಏಳು ದಿನಗಳವರೆಗೆ ಸರ್ವೇಶ್ವರನಿಗೆ ಹಬ್ಬವನ್ನು ಆಚರಿಸಬೇಕು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ ‘ಏಳನೆಯ ತಿಂಗಳಿನ ಹದಿನೈದನೆಯ ದಿವಸದಲ್ಲಿ ನೀವು ಪರಿಶುದ್ಧ ಸಭೆಯಾಗಿ ಕೂಡಿಬರಬೇಕು. ದೈನಂದಿನ ಉದ್ಯೋಗವನ್ನು ಮಾಡಬಾರದು. ಯೆಹೋವ ದೇವರಿಗೆ ಏಳು ದಿವಸ ಹಬ್ಬವನ್ನು ಮಾಡಬೇಕು.