Numbers 29:13 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನೀವು ಯೆಹೋವನಿಗೆ ಸರ್ವಾಂಗಹೋಮಗಳನ್ನು ಅರ್ಪಿಸಬೇಕು. ಅದರ ಸುವಾಸನೆಯು ಯೆಹೋವನಿಗೆ ಮೆಚ್ಚಿಗೆಕರವಾಗಿದೆ. ಸರ್ವಾಂಗಹೋಮವಾಗಿ ಹದಿಮೂರು ಹೋರಿಗಳನ್ನು, ಎರಡು ಟಗರುಗಳನ್ನು ಮತ್ತು ಒಂದು ವರ್ಷದ ಹದಿನಾಲ್ಕು ಗಂಡು ಕುರಿಮರಿಗಳನ್ನು ಅರ್ಪಿಸಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ದಿನದಲ್ಲಿ ನಿತ್ಯ ಸರ್ವಾಂಗಹೋಮ, ಧಾನ್ಯದ್ರವ್ಯ, ಪಾನದ್ರವ್ಯ, ನೈವೇದ್ಯಗಳನ್ನೂ ಮಾತ್ರವಲ್ಲದೆ ಯೆಹೋವನಿಗೆ ಸುವಾಸನೆಯನ್ನು ಉಂಟುಮಾಡುವ ಸರ್ವಾಂಗಹೋಮಕ್ಕಾಗಿ ದೋಷವಿಲ್ಲದ ಹದಿಮೂರು ಹೋರಿಗಳನ್ನೂ, ಎರಡು ಟಗರುಗಳನ್ನೂ, ಹದಿನಾಲ್ಕು ಪೂರ್ಣಾಂಗವಾದ ಒಂದು ವರ್ಷದ ಕುರಿಗಳನ್ನೂ,
Kannada BSI Bible 2016
ಕರ್ತನಿಗೆ ಏಳು ದಿವಸ ಹಬ್ಬವನ್ನು ಮಾಡಬೇಕು. ಕರ್ತನಿಗೆ ಸುವಾಸನೆಯ ಬೆಂಕಿಯಿಂದ ಮಾಡಿದ ದಹನಬಲಿಗಾಗಿ ಬಲಿಯನ್ನು ಅರ್ಪಿಸಬೇಕು; ಏನಂದರೆ, ಹದಿಮೂರು ಎಳೇ ಹೋರಿ ಗಳನ್ನೂ ಎರಡು ಟಗರುಗಳನ್ನೂ ವರುಷದ ಹದಿನಾಲ್ಕು ಕುರಿಮರಿಗಳನ್ನೂ; ಅವು ದೋಷವಿಲ್ಲದ್ದಾಗಿರಬೇಕು;
Kannada BSI JV (ಕನ್ನಡ ಸತ್ಯವೇದವು J.V. (BSI))
ಆ ದಿನದಲ್ಲಿ ನಿತ್ಯಸರ್ವಾಂಗಹೋಮವನ್ನೂ ಅದಕ್ಕೆ ನೇಮಕವಾದ ಧಾನ್ಯದ್ರವ್ಯಪಾನದ್ರವ್ಯನೈವೇದ್ಯಗಳನ್ನೂ ಮಾತ್ರವಲ್ಲದೆ ಯೆಹೋವನಿಗೆ ಸುವಾಸನೆಯನ್ನುಂಟುಮಾಡುವ ಸರ್ವಾಂಗಹೋಮಕ್ಕಾಗಿ ಹದಿಮೂರು ಹೋರಿಗಳನ್ನೂ ಎರಡು ಟಗರುಗಳನ್ನೂ ಹದಿನಾಲ್ಕು ಪೂರ್ಣಾಂಗವಾದ ವರುಷದ ಕುರಿಗಳನ್ನೂ;
Kannada Bible (KNCL) BSI 2016
ಆ ದಿನದಲ್ಲಿ ದೈನಿಕ ದಹನಬಲಿಯನ್ನೂ ಅದಕ್ಕೆ ಸಂಬಂಧಿಸಿದ ಧಾನ್ಯ-ಪಾನ ನೈವೇದ್ಯಗಳನ್ನೂ ಅರ್ಪಿಸಬೇಕು. ಅವುಗಳ ಸುಗಂಧಕರವಾದ ದಹನಬಲಿಗಾಗಿ ಕಳಂಕರಹಿತ ಆದ ಹದಿಮೂರು ಹೋರಿಗಳನ್ನು, ಎರಡು ಟಗರುಗಳನ್ನು, ವರ್ಷದ ಹದಿನಾಲ್ಕು ಕುರಿಗಳನ್ನು ಸಮರ್ಪಿಸಬೇಕು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆಹೋವ ದೇವರಿಗೆ ಸುವಾಸನೆಯ ಬೆಂಕಿಯಿಂದ ಮಾಡಿದ ದಹನಬಲಿಯಾಗಿ ಬಲಿಯನ್ನು ಅರ್ಪಿಸಬೇಕು. ಏನೆಂದರೆ, ದೋಷವಿಲ್ಲದ ಹದಿಮೂರು ಎಳೆಯ ಹೋರಿಗಳನ್ನೂ ಎರಡು ಟಗರುಗಳನ್ನೂ ಒಂದು ವರ್ಷದ ಹದಿನಾಲ್ಕು ಕುರಿಮರಿಗಳನ್ನೂ,