Numbers 29:7 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ಏಳನೆಯ ತಿಂಗಳಿನ ಹತ್ತನೆಯ ದಿನದಲ್ಲಿ ವಿಶೇಷ ಸಭೆ ಸೇರಬೇಕು. ಆ ದಿನದಲ್ಲಿ ನೀವು ಉಪವಾಸ ಮಾಡಬೇಕು; ಯಾವ ಕೆಲಸವನ್ನೂ ಮಾಡಬಾರದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“‘ಏಳನೆಯ ತಿಂಗಳಿನ ಹತ್ತನೆಯ ದಿನದಲ್ಲಿ ನೀವು ಯಾವ ಕೆಲಸವನ್ನೂ ಮತ್ತು ಊಟವನ್ನು ಮಾಡದೆ ನಿಮ್ಮನ್ನು ತಗ್ಗಿಸಿಕೊಳ್ಳುವುದಕ್ಕಾಗಿ ದೇವಾರಾಧನೆಗಾಗಿ ಸಭೆಕೂಡಬೇಕು.
Kannada BSI Bible 2016
ಈ ಏಳನೇ ತಿಂಗಳಿನ ಹತ್ತನೇ ದಿವಸದಲ್ಲಿ ನೀವು ಪರಿಶುದ್ಧ ಸಭೆಯಾಗಿ ಕೂಡಬೇಕು; ಅದರಲ್ಲಿ ನಿಮ್ಮ ಪ್ರಾಣಗಳನ್ನು ವ್ಯಥೆಪಡಿಸಿ ಯಾವ ಕೆಲಸವನ್ನಾದರೂ ಮಾಡಬಾರದು.
Kannada BSI JV (ಕನ್ನಡ ಸತ್ಯವೇದವು J.V. (BSI))
ಉಪವಾಸಾಚರಣೆಯ ಏಳನೆಯ ತಿಂಗಳಿನ ಹತ್ತನೆಯ ದಿನದಲ್ಲಿ ನೀವು ಯಾವ ಕೆಲಸವನ್ನೂ ಮಾಡದೆ ದೇವಾರಾಧನೆಗಾಗಿ ಸಭೆಕೂಡಬೇಕು.
Kannada Bible (KNCL) BSI 2016
‘ಉಪವಾಸ ಆಚರಣೆಯ ಏಳನೆಯ ತಿಂಗಳಿನ ಹತ್ತನೆಯ ದಿನ ನೀವು ಯಾವ ದುಡಿಮೆಯನ್ನು ಮಾಡದೆ ದೇವಾರಾಧನೆಗಾಗಿ ಸಭೆ ಕೂಡಬೇಕು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ ‘ಏಳನೆಯ ತಿಂಗಳಿನ ಹತ್ತನೆಯ ದಿವಸದಲ್ಲಿ ನೀವು ಪರಿಶುದ್ಧ ಸಭೆಯನ್ನು ಕೂಡಿಸಬೇಕು. ನೀವು ಎಲ್ಲವನ್ನು ವರ್ಜಿಸಿ, ಯಾವ ಕೆಲಸವನ್ನೂ ಮಾಡಬಾರದು.