Numbers 29:8 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನೀವು ಯೆಹೋವನಿಗೆ ಸುಗಂಧಕರವಾಗಿರುವ ಸರ್ವಾಂಗಹೋಮವನ್ನಾಗಿ ಒಂದು ಹೋರಿಯನ್ನೂ ಒಂದು ಟಗರನ್ನೂ ಒಂದು ವರ್ಷದ ಏಳು ಗಂಡು ಕುರಿಮರಿಗಳನ್ನೂ ಅರ್ಪಿಸಬೇಕು. ಇವು ಪೂರ್ಣಾಂಗವಾದವುಗಳಾಗಿರಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀವು ಯೆಹೋವನಿಗೆ ಸುವಾಸನೆಯನ್ನು ಉಂಟುಮಾಡುವ ಸರ್ವಾಂಗಹೋಮಕ್ಕಾಗಿ ದೋಷವಿಲ್ಲದ ಒಂದು ಹೋರಿ, ಒಂದು ಟಗರು, ಏಳು ಪೂರ್ಣಾಂಗವಾದ ಒಂದು ವರ್ಷದ ಕುರಿಮರಿಗಳನ್ನು ಸಮರ್ಪಿಸಬೇಕು.
Kannada BSI Bible 2016
ಆದರೆ ಕರ್ತನಿಗೆ ಸುವಾಸನೆಯಾದ ದಹನ ಬಲಿಗಾಗಿ ದೋಷವಿಲ್ಲದ ಒಂದು ಎಳೇ ಹೋರಿ ಯನ್ನೂ ಒಂದು ಟಗರನ್ನೂ ವರುಷದ ಏಳು ಕುರಿಮರಿ ಗಳನ್ನೂ
Kannada BSI JV (ಕನ್ನಡ ಸತ್ಯವೇದವು J.V. (BSI))
ನೀವು ಯೆಹೋವನಿಗೆ ಸುವಾಸನೆಯನ್ನುಂಟುಮಾಡುವ ಸರ್ವಾಂಗಹೋಮಕ್ಕಾಗಿ ಒಂದು ಹೋರಿ, ಒಂದು ಟಗರು, ಏಳು ಪೂರ್ಣಾಂಗವಾದ ವರುಷದ ಕುರಿ ಇವುಗಳನ್ನೂ;
Kannada Bible (KNCL) BSI 2016
ಸರ್ವೇಶ್ವರನಿಗೆ ಸುಗಂಧಕರವಾದ ದಹನಬಲಿಗಾಗಿ ಕಳಂಕರಹಿತವಾದ ಒಂದು ಹೋರಿ, ಒಂದು ಟಗರು, ವರ್ಷದ ಏಳು ಕುರಿ ಇವುಗಳನ್ನು ಹಾಗು
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಯೆಹೋವ ದೇವರಿಗೆ ಸುವಾಸನೆಯಾದ ದಹನಬಲಿಗಾಗಿ ದೋಷವಿಲ್ಲದ ಒಂದು ಎಳೆಯ ಹೋರಿಯನ್ನೂ ಒಂದು ಟಗರನ್ನೂ ಒಂದು ವರ್ಷದ ಏಳು ಕುರಿಮರಿಗಳನ್ನೂ,