Numbers 3:32 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಮಹಾಯಾಜಕ ಆರೋನನ ಮಗನಾದ ಎಲ್ಲಾಜಾರನು ಲೇವಿಯರಿಗೆ ನಾಯಕನಾಗಿದ್ದನು. ಪವಿತ್ರವಸ್ತುಗಳನ್ನು ನೋಡಿಕೊಳ್ಳುವ ಜನರಿಗೆಲ್ಲಾ ಎಲ್ಲಾಜಾರನು ಮೇಲ್ವಿಚಾರಕನಾಗಿದ್ದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದಲ್ಲದೆ ಮಹಾಯಾಜಕ ಆರೋನನ ಮಗನಾದ ಎಲ್ಲಾಜಾರನು ಲೇವಿಯರ ಪ್ರಧಾನಪುರುಷರ ಅಧ್ಯಕ್ಷನಾಗಿ ದೇವಸ್ಥಾನವನ್ನು ನೋಡಿಕೊಳ್ಳುವವರ ಮೇಲ್ವಿಚಾರಕನಾಗಿರಬೇಕು.
Kannada BSI Bible 2016
ಇದಲ್ಲದೆ ಯಾಜಕನಾಗಿರುವ ಆರೋನನ ಮಗನಾದ ಎಲ್ಲಾಜಾರನು ಲೇವಿಯರ ಮುಖ್ಯಸ್ಥರ ಮೇಲೆ ಮುಖ್ಯಸ್ಥನು, ಪರಿಶುದ್ಧ ಸ್ಥಳದ ಅಪ್ಪಣೆಯನ್ನು ಕೈಕೊಳ್ಳುವವರ ಮೇಲೆ ವಿಚಾರಕನು ಅವನೇ.
Kannada BSI JV (ಕನ್ನಡ ಸತ್ಯವೇದವು J.V. (BSI))
ಅದಲ್ಲದೆ ಮಹಾಯಾಜಕ ಆರೋನನ ಮಗನಾದ ಎಲ್ಲಾಜಾರನು ಲೇವಿಯರ ಪ್ರಧಾನರಿಗೆ ಅಧ್ಯಕ್ಷನಾಗಿ ದೇವಸ್ಥಾನವನ್ನು ಕಾಯುವವರ ಮೇಲ್ವಿಚಾರಕನಾಗಿರಬೇಕು.
Kannada Bible (KNCL) BSI 2016
ಇದಲ್ಲದೆ ಮಹಾಯಾಜಕ ಆರೋನನ ಮಗ ಎಲ್ಲಾಜಾರನು ಲೇವಿಯರ ಮುಖ್ಯಸ್ಥರಿಗೆ ಅಧ್ಯಕ್ಷನಾಗಿದ್ದ; ದೇವಸ್ಥಾನವನ್ನು ಕಾಯುವವರಿಗೆ ಮೇಲ್ವಿಚಾರಕನಾಗಿದ್ದ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ಯಾಜಕನಾಗಿರುವ ಆರೋನನ ಮಗ ಎಲಿಯಾಜರನು ಲೇವಿಯರ ಮತ್ತೊಬ್ಬ ನಾಯಕನಾಗಿದ್ದನು. ಪರಿಶುದ್ಧಸ್ಥಳದ ಜವಾಬ್ದಾರಿಕೆಯುಳ್ಳವನ ಮೇಲೆ ವಿಚಾರಕನು ಅವನೇ.