Numbers 3:35 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಮೆರಾರೀ ಗೋತ್ರಗಳ ನಾಯಕನು ಅಬೀಹೈಲನ ಮಗನಾದ ಚೂರೀಯೇಲ್. ಮೆರಾರೀ ಗೋತ್ರಗಳವರು ಪವಿತ್ರ ಗುಡಾರದ ಉತ್ತರ ದಿಕ್ಕಿನಲ್ಲಿ ಪಾಳೆಯ ಮಾಡಿಕೊಂಡರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಮೆರಾರೀಯರ ಗೋತ್ರಗಳ ಪ್ರಧಾನಪುರುಷನು ಅಬೀಹೈಲನ ಮಗನಾದ ಚೂರೀಯೇಲ್. ಇವರು ದೇವದರ್ಶನದ ಗುಡಾರದ ಉತ್ತರ ದಿಕ್ಕಿನಲ್ಲಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು.
Kannada BSI Bible 2016
ಅಬೀಹೈಲನ ಮಗನಾದ ಚೂರೀಯೇಲನು ಮೆರಾ ರೀಯ ಕುಟುಂಬಗಳ ತಂದೆಯ ಮನೆಗೆ ಮುಖ್ಯಸ್ಥನು; ಅವರು ಗುಡಾರದ ಬಳಿಯಲ್ಲಿ ಉತ್ತರದಿಕ್ಕಿನ ಕಡೆಗೆ ಇಳುಕೊಳ್ಳಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ಮೆರಾರೀಯರ ಗೋತ್ರಗಳ ಪ್ರಧಾನಪುರುಷನು ಅಬೀಹೈಲನ ಮಗನಾದ ಚೂರೀಯೇಲ್. ಇವರು ದೇವದರ್ಶನದ ಗುಡಾರದ ಉತ್ತರ ದಿಕ್ಕಿನಲ್ಲಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು.
Kannada Bible (KNCL) BSI 2016
ಮೆರಾರೀಯರ ಗೋತ್ರಗಳ ಮುಖ್ಯಸ್ಥನು ಅಬೀಹೈಲನ ಮಗ ಚೂರೀಯೇಲ್. ಇವರು ದೇವದರ್ಶನದ ಗುಡಾರದ ಉತ್ತರ ದಿಕ್ಕಿನಲ್ಲಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕಾಗಿತ್ತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅಬೀಹೈಲನ ಮಗ ಜುರೀಯೇಲನು ಮೆರಾರೀ ಗೋತ್ರದ ಮುಖ್ಯಸ್ಥನು. ಅವರು ದೇವದರ್ಶನ ಗುಡಾರದ ಬಳಿಯಲ್ಲಿ ಉತ್ತರ ದಿಕ್ಕಿನ ಕಡೆಗೆ ಇಳಿದುಕೊಳ್ಳಬೇಕು.