Numbers 3:43 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಒಂದು ತಿಂಗಳು ಮತ್ತು ಅದಕ್ಕಿಂತ ಹೆಚ್ಚು ವಯಸ್ಸಾದ ಎಲ್ಲಾ ಚೊಚ್ಚಲು ಗಂಡಸರ ಹೆಸರುಗಳನ್ನು ಮೋಶೆ ಪಟ್ಟಿ ಮಾಡಿದನು. ಆ ಪಟ್ಟಿಯಲ್ಲಿ 22,273 ಹೆಸರುಗಳಿದ್ದವು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಹೆಸರು ಹಿಡಿದು ಎಣಿಕೆ ಮಾಡಲ್ಪಟ್ಟ ಚೊಚ್ಚಲಾದವರು ಅಂದರೆ ಒಂದು ತಿಂಗಳು ಮತ್ತು ಅದಕ್ಕೆ ಮೇಲ್ಪಟ್ಟ ವಯಸ್ಸುಳ್ಳ ಗಂಡಸರ ಸಂಖ್ಯೆ 22,273 ಮಂದಿ.
Kannada BSI Bible 2016
ಒಂದು ತಿಂಗಳು ಮೊದಲು ಗೊಂಡು ಮೇಲ್ಪಟ್ಟ ಪ್ರಾಯವುಳ್ಳ ಗಂಡಸರಲ್ಲಿ ಚೊಚ್ಚ ಲಾದವರೆಲ್ಲರು ಅಂದರೆ ಹೆಸರುಗಳ ಲೆಕ್ಕದಲ್ಲಿ ಎಣಿಸಲ್ಪಟ್ಟವರು ಇಪ್ಪತ್ತೆರಡು ಸಾವಿರದ ಇನ್ನೂರ ಎಪ್ಪತ್ತುಮೂರು ಮಂದಿಯಾಗಿದ್ದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಹೆಸರುಹಿಡಿದು ಲೆಕ್ಕಿಸಲ್ಪಟ್ಟ ಚೊಚ್ಚಲಾದವರು ಅಂದರೆ ಒಂದು ತಿಂಗಳು ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳ ಗಂಡಸರು 22,273 ಮಂದಿ.
Kannada Bible (KNCL) BSI 2016
ಹೆಸರು ಹಿಡಿದು ಎಣಿಕೆಯಾದವರ, ಅಂದರೆ ಒಂದು ತಿಂಗಳ ಮತ್ತು ಮೇಲ್ಪಟ್ಟ ವಯಸ್ಸಿನ ಗಂಡಸರ ಸಂಖ್ಯೆ - 22,273:
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಒಂದು ತಿಂಗಳೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಜೇಷ್ಠರಾದವರೆಲ್ಲರ ಒಟ್ಟು ಸಂಖ್ಯೆ 22,273 ಮಂದಿ.