Numbers 3:47 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅಧಿಕೃತ ಅಳತೆಯನ್ನು ಉಪಯೋಗಿಸಿ ಪ್ರತಿಯೊಬ್ಬನಿಗೆ ಅಂದರೆ 273 ಮಂದಿಗೆ ಐದೈದು ಶೆಕೆಲ್ ಬೆಳ್ಳಿಯನ್ನು ಸಂಗ್ರಹಿಸು. (ಅಧಿಕೃತ ಅಳತೆಯಲ್ಲಿ ಒಂದು ಶೆಕೆಲ್ ಅಂದರೆ ಇಪ್ಪತ್ತು ಗೆರಾ.) ಇಸ್ರೇಲರಿಂದ ಈ ಬೆಳ್ಳಿಯನ್ನು ಸಂಗ್ರಹಿಸು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ದೇವಸ್ಥಾನದ ಸೇವೆಗೆ ನೇಮಕವಾದ ಶೆಕೆಲ್ ಗಳ ಮೇರೆಯ ಪ್ರಕಾರ ಒಬ್ಬೊಬ್ಬನಿಗೆ ಐದು ಬೆಳ್ಳಿಯ ನಾಣ್ಯಗಳನ್ನು ತೆಗೆದುಕೊಳ್ಳಬೇಕು.
Kannada BSI Bible 2016
ಒಬ್ಬೊಬ್ಬ ನಿಗೆ ಐದು ಶೇಕೆಲುಗಳನ್ನು ತೆಗೆದುಕೋ. ಪರಿಶುದ್ಧ ಶೇಕೆಲಿನ ಮೇರೆಗೆ (ಶೇಕೆಲಿಗೆ ಇಪ್ಪತ್ತು ಗೇರಾ) ಈ ಪ್ರಕಾರವಾಗಿ ತೆಗೆದುಕೊಳ್ಳಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ದೇವರ ಸೇವೆಗೆ ನೇಮಕವಾದ ಇಪ್ಪತ್ತು ಗೇರಾ ತೂಕದ ರೂಪಾಯಿಯ ಮೇರೆಗೆ ತೆಗೆದುಕೊಳ್ಳಬೇಕು.
Kannada Bible (KNCL) BSI 2016
ದೇವರ ಸೇವೆಗೆ ನಿಗದಿಯಾದ ನಾಣ್ಯಗಳ ಮೇರೆಗೆ ತೆಗೆದುಕೊಳ್ಳಬೇಕು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಒಬ್ಬೊಬ್ಬನಿಗೆ ಐದು ಶೆಕೆಲ್ ತೆಗೆದುಕೋ. ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, ಅಂದರೆ ಇಪ್ಪತ್ತು ಗೇರಾ ತೂಕದ ಶೆಕೆಲ್ ಈ ಪ್ರಕಾರವಾಗಿ ಇದನ್ನು ತೆಗೆದುಕೊಳ್ಳಬೇಕು.