Numbers 3:8 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ದೇವದರ್ಶನಗುಡಾರವು ಚಲಿಸುತ್ತಿರುವಾಗ ಲೇವಿಯರು ದೇವದರ್ಶನಗುಡಾರಕ್ಕೆ ಸಂಬಂಧಿಸಿದ ಭಾರವಾದ ಕೆಲಸಗಳನ್ನು ಮಾಡುವುದಲ್ಲದೆ, ದೇವದರ್ಶನ ಗುಡಾರದ ಎಲ್ಲಾ ಉಪಕರಣಗಳನ್ನು ಇಸ್ರೇಲರಿಗೋಸ್ಕರ ಕಾಯಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರು ದೇವದರ್ಶನದ ಗುಡಾರದ ಸಾಮಾನುಗಳನ್ನು ಕಾಯಬೇಕು. ಇಸ್ರಾಯೇಲರಿಗೋಸ್ಕರ ದೇವಸ್ಥಾನದ ಸೇವಕಾರ್ಯವನ್ನು ನಡೆಸಬೇಕು.
Kannada BSI Bible 2016
ಅವರು ಸಭೆಯ ಗುಡಾರದ ಎಲ್ಲಾ ವಸ್ತುಗಳನ್ನೂ ಇಸ್ರಾಯೇಲ್‌ ಮಕ್ಕಳ ಅಪ್ಪಣೆ ಯನ್ನೂ ಕಾಪಾಡಿ ಗುಡಾರದ ಸೇವೆಯನ್ನು ಮಾಡ ಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರು ದೇವದರ್ಶನದ ಗುಡಾರದ ಸಾಮಾನುಗಳನ್ನು ಕಾಯಬೇಕು; ಇಸ್ರಾಯೇಲ್ಯರಿಗೋಸ್ಕರ ದೇವಸ್ಥಾನದ ಪರಿಚರ್ಯವನ್ನು ನಡಿಸಬೇಕು.
Kannada Bible (KNCL) BSI 2016
ದೇವದರ್ಶನದ ಗುಡಾರಕ್ಕೆ ಸೇರಿದ ಉಪಕರಣಗಳನ್ನು ನೋಡಿಕೊಳ್ಳಬೇಕು. ಇಸ್ರಯೇಲರ ಪರವಾಗಿ ದೇವಸ್ಥಾನದ ಸೇವಾಕಾರ್ಯಗಳನ್ನು ನಡೆಸಬೇಕು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು ದೇವದರ್ಶನದ ಗುಡಾರದ ಎಲ್ಲಾ ಸಲಕರಣೆಗಳನ್ನು ನೋಡಿಕೊಳ್ಳಬೇಕು. ಗುಡಾರದ ಸೇವೆಯನ್ನು ಮಾಡುವ ಮೂಲಕ ಇಸ್ರಾಯೇಲರ ಜವಾಬ್ದಾರಿಗಳನ್ನು ಪೂರೈಸಬೇಕು.