Numbers 3:9 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ಲೇವಿಯರನ್ನು ಆರೋನನಿಗೂ ಅವನ ಪುತ್ರರಿಗೂ ಒಪ್ಪಿಸಿಕೊಡು. ಅವರು ಇಸ್ರೇಲರ ಮಧ್ಯದಿಂದ ಆರೋನನಿಗೋಸ್ಕರವಾಗಿ ಪ್ರತಿಷ್ಠಿತರಾಗಿದ್ದಾರೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ನೀನು ಲೇವಿಯರನ್ನು ಆರೋನನಿಗೂ ಮತ್ತು ಅವನ ಮಕ್ಕಳಿಗೂ ಒಪ್ಪಿಸಬೇಕು. ಇಸ್ರಾಯೇಲರಲ್ಲಿ ಆರೋನನಿಗೆ ಸಂಪೂರ್ಣವಾಗಿ ಒಪ್ಪಿಸಲ್ಪಟ್ಟವರು ಇವರೇ.
Kannada BSI Bible 2016
ಲೇವಿಯರನ್ನು ಆರೋನನಿಗೂ ಅವನ ಕುಮಾರರಿಗೂ ಕೊಡಬೇಕು; ಅವರು ಇಸ್ರಾಯೇಲ್ ಮಕ್ಕಳೊಳಗಿಂದ ಅವನಿಗೆ ಪೂರ್ಣವಾಗಿ ಕೊಡಲ್ಪಟ್ಟ ವರೇ.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀನು ಲೇವಿಯರನ್ನು ಆರೋನನಿಗೂ ಅವನ ಮಕ್ಕಳಿಗೂ ಒಪ್ಪಿಸಬೇಕು; ಇಸ್ರಾಯೇಲ್ಯರಲ್ಲಿ ಆರೋನನಿಗೆ ಸಂಪೂರ್ಣವಾಗಿ ವಶಮಾಡಲ್ಪಟ್ಟವರು ಇವರೇ.
Kannada Bible (KNCL) BSI 2016
ನೀನು ಲೇವಿಯರನ್ನು ಆರೋನನಿಗೂ ಅವನ ಮಕ್ಕಳಿಗೂ ಒಪ್ಪಿಸು. ಇಸ್ರಯೇಲರಲ್ಲಿ ಆರೋನನಿಗೆ ಸಂಪೂರ್ಣ ಶರಣರು ಇವರೇ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಲೇವಿಯರನ್ನು ಆರೋನನಿಗೂ ಅವನ ಪುತ್ರರಿಗೂ ಒಪ್ಪಿಸು. ಇಸ್ರಾಯೇಲರೊಳಗಿಂದ ಅವನಿಗೆ ಪೂರ್ಣವಾಗಿ ಕೊಡಲಾದವರು ಇವರೇ.