Numbers 30:2 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯಾವನಾದರೂ ಯೆಹೋವನಿಗೆ ಇಂಥದ್ದನ್ನು ಕೊಡುತ್ತೇನೆಂದು ಹರಕೆ ಮಾಡಿದರೆ ಅಥವಾ ತಾನು ಇಂಥದ್ದನ್ನು ಮಾಡುವುದಿಲ್ಲ ಎಂದು ಆಣೆಯಿಟ್ಟುಕೊಂಡರೆ, ಅವನು ತನ್ನ ಮಾತನ್ನು ಮೀರದೆ ತಾನು ಹೇಳಿದಂತೆಯೇ ನೆರವೇರಿಸಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯಾವನಾದರೂ ಯೆಹೋವನಿಗೆ ಹರಕೆ ಮಾಡಿದರೆ ಇಲ್ಲವೆ ತಾನು ಅಶುದ್ಧವಾದುದನ್ನು ಮುಟ್ಟದೆ ಇರುವೆನೆಂದು ಆಣೆಯಿಟ್ಟುಕೊಂಡರೆ ಅವನು ತನ್ನ ಮಾತನ್ನು ಮೀರದೆ ಹೇಳಿದಂತೆಯೇ ನೆರವೇರಿಸಬೇಕು.
Kannada BSI Bible 2016
ಒಬ್ಬನು ಕರ್ತನಿಗೆ ಪ್ರಮಾಣವನ್ನು ಮಾಡಿದರೆ ಇಲ್ಲವೆ ಕಟ್ಟಳೆಯಿಂದ ತನ್ನ ಪ್ರಾಣವನ್ನು ಬಾಧಿಸುವ ಆಣೆ ಇಟ್ಟುಕೊಂಡರೆ ಅವನು ತನ್ನ ಮಾತನ್ನು ತಪ್ಪಿಸಬಾರದು, ಬಾಯಿಂದ ಹೊರಟ ಎಲ್ಲಾದರ ಪ್ರಕಾರ ಮಾಡಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯಾವನಾದರೂ ಯೆಹೋವನಿಗೆ ಹರಕೆಮಾಡಿದರೆ ಇಲ್ಲವೆ ತಾನು ಯಾವದಾದರೂ ಒಂದನ್ನು ಮುಟ್ಟದೆ ಇರುವೆನೆಂದು ಆಣೆಯಿಟ್ಟುಕೊಂಡರೆ ಅವನು ತನ್ನ ಮಾತನ್ನು ಮೀರದೆ ಹೇಳಿದಂತೆಯೇ ನೆರವೇರಿಸಬೇಕು.
Kannada Bible (KNCL) BSI 2016
“ನಿಮ್ಮಲ್ಲಿ ಯಾರಾದರು ಸರ್ವೇಶ್ವರನಿಗೆ ಹರಕೆ ಮಾಡಿದರೆ, ಇಲ್ಲವೆ ತಾನು ವಸ್ತುವೊಂದನ್ನು ಮುಟ್ಟುವುದಿಲ್ಲವೆಂದು ಆಣೆಯಿಟ್ಟು ಹೇಳಿದರೆ ಅಂಥವನು ತನ್ನ ಮಾತನ್ನು ಮೀರದೆ ನುಡಿದಂತೆ ನೆರವೇರಿಸಬೇಕು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯಾವನಾದರೂ ಯೆಹೋವ ದೇವರಿಗೆ ಹರಕೆಯನ್ನು ಮಾಡಿದರೆ, ಇಲ್ಲವೆ ಕಟ್ಟಳೆಯಿಂದ ತನ್ನ ಪ್ರಾಣವನ್ನು ಬಾಧಿಸುವ ಆಣೆ ಇಟ್ಟುಕೊಂಡರೆ, ಅವನು ತನ್ನ ಮಾತನ್ನು ತಪ್ಪಿಸಬಾರದು. ಬಾಯಿಂದ ಹೊರಟ ಮಾತುಗಳ ಪ್ರಕಾರ ಎಲ್ಲವನ್ನೂ ಮಾಡಬೇಕು.