Numbers 30:4 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅವಳ ತಂದೆಯು ಅವಳ ಹರಕೆಯನ್ನಾಗಲಿ ಆಣೆಯನ್ನಾಗಲಿ ಕೇಳಿಯೂ ಅದರ ಬಗ್ಗೆ ಅವಳಿಗೆ ಏನೂ ಹೇಳದಿದ್ದರೆ, ಆಕೆಯು ಅಂಥಾ ಹರಕೆಯನ್ನೂ ಆಣೆಯನ್ನೂ ನೆರವೇರಿಸಲೇಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವಳ ತಂದೆಯು ಆ ಸಂಗತಿಯನ್ನು ತಿಳಿದು ಸುಮ್ಮನಿದ್ದರೆ ಅವಳು ಆ ಹರಕೆಯನ್ನು ನೆರವೇರಿಸಲೇಬೇಕು. ಯಾವುದನ್ನು ಮುಟ್ಟದೆ ಇರುವೆನೆಂದು ಹೇಳಿದಳೋ ಅದನ್ನು ಮುಟ್ಟಲೇ ಬಾರದು.
Kannada BSI Bible 2016
ಅವಳ ತಂದೆ ಅವಳ ಪ್ರಮಾಣವನ್ನೂ ಅವಳು ತನ್ನ ಪ್ರಾಣದ ಮೇಲೆ ಬಂಧಿಸಿಕೊಂಡದ್ದನ್ನೂ ಕೇಳಿ ಅದಕ್ಕೆ ಮೌನವಾಗಿರುವ ಪಕ್ಷದಲ್ಲಿ ಅವಳ ಪ್ರಮಾಣ ಗಳೆಲ್ಲವೂ ಅವಳು ತನ್ನ ಪ್ರಾಣದ ಮೇಲೆ ಮಾಡಿದ ಬಂಧನವೆಲ್ಲವೂ ನಿಲ್ಲುವವು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವಳ ತಂದೆಯು ಆ ಸಂಗತಿಯನ್ನು ತಿಳಿದು ಸುಮ್ಮನಿದ್ದರೆ ಅವಳು ಆ ಹರಕೆಯನ್ನು ನೆರವೇರಿಸಲೇಬೇಕು; ಯಾವದನ್ನು ಮುಟ್ಟದೆ ಇರುವೆನೆಂದು ಹೇಳಿದಳೋ ಅದನ್ನು ಮುಟ್ಟಲೇಬಾರದು.
Kannada Bible (KNCL) BSI 2016
ಅವಳ ತಂದೆ ಆ ಸಂಗತಿಯನ್ನು ತಿಳಿದು ಸುಮ್ಮನಿದ್ದರೆ ಅವಳು ಆ ಹರಕೆಯನ್ನು ನೆರವೇರಿಸಲೇಬೇಕು; ಯಾವುದನ್ನು ಮುಟ್ಟುವುದಿಲ್ಲವೆಂದು ಹೇಳಿದ್ದಳೋ ಅದನ್ನು ಮುಟ್ಟಲೇಬಾರದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವಳ ತಂದೆಯು ಆ ವಿಷಯವನ್ನು ತಿಳಿದು ಮೌನವಾಗಿದ್ದರೆ, ಅವಳು ಆ ಹರಕೆ ಮತ್ತು ಪ್ರಮಾಣಗಳನ್ನು ನೆರವೇರಿಸಲೇಬೇಕು.