Numbers 30:9 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ವಿಧವೆಯಾಗಲಿ ವಿವಾಹವಿಚ್ಛೇಧನ ಹೊಂದಿದ ಸ್ತ್ರೀಯಾಗಲಿ ತಾನು ಮಾಡಿದ ಪ್ರತಿಯೊಂದು ಹರಕೆಯನ್ನೂ ಆಣೆಯನ್ನೂ ನೆರವೇರಿಸಲೇಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ವಿಧವೆಯು ಇಲ್ಲವೆ ಗಂಡನಿಂದ ಬಿಡಲ್ಪಟ್ಟ ಸ್ತ್ರೀಯು ಇಂತಹ ಪ್ರಮಾಣಮಾಡಿಕೊಂಡರೆ ಅದು ನಿಲ್ಲುವುದು. ಅವಳು ಅದನ್ನು ನೆರವೇರಿಸಬೇಕು.
Kannada BSI Bible 2016
ಇದಲ್ಲದೆ ವಿಧವೆಯಾದರೂ ಪರಿತ್ಯಾಗ ಮಾಡ ಲ್ಪಟ್ಟವಳಾದರೂ ತಮ್ಮ ಪ್ರಾಣಗಳನ್ನು ಬಂಧಿಸಿದ ಒಂದೊಂದು ಪ್ರಮಾಣವು ಅವರ ಮೇಲೆ ನಿಲ್ಲುವದು.
Kannada BSI JV (ಕನ್ನಡ ಸತ್ಯವೇದವು J.V. (BSI))
ವಿಧವೆಯು ಇಲ್ಲವೆ ಗಂಡನಿಂದ ಬಿಡಲ್ಪಟ್ಟ ಸ್ತ್ರೀಯು ಇಂಥ ಪ್ರಮಾಣಮಾಡಿಕೊಂಡರೆ ಅದು ನಿಲ್ಲುವದು; ಅವಳು ಅದನ್ನು ನೆರವೇರಿಸಬೇಕು.
Kannada Bible (KNCL) BSI 2016
“ವಿಧವೆ ಇಲ್ಲವೆ ಗಂಡನಿಂದ ಬೇರ್ಪಟ್ಟ ಮಹಿಳೆ ಇಂಥ ಪ್ರಮಾಣವನ್ನು ಕೈಗೊಂಡಿದ್ದರೆ ಅದು ನಿಲ್ಲುತ್ತದೆ. ಅವಳು ಅದನ್ನು ನೆರವೇರಿಸಬೇಕು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಇದಲ್ಲದೆ ವಿಧವೆಯಾದರೂ ವಿವಾಹ ವಿಚ್ಛೇದಿತ ಮಹಿಳೆಯಾದರೂ ಇಂತಹ ಹರಕೆ ಇಲ್ಲವೆ ಪ್ರಮಾಣ ಮಾಡಿಕೊಂಡರೆ ಅವಳು ಅದನ್ನು ನೆರವೇರಿಸಬೇಕು.