Numbers 33:4 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಈಜಿಪ್ಟಿನವರು ಯೆಹೋವನು ಕೊಂದುಹಾಕಿದ ತಮ್ಮ ಚೊಚ್ಚಲು ಮಕ್ಕಳನ್ನು ಹೂಳಿಡುತ್ತಿದ್ದರು. ಯೆಹೋವನು ಈಜಿಪ್ಟಿನ ದೇವರುಗಳನ್ನು ಶಿಕ್ಷಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ಕಾಲದಲ್ಲಿ ಯೆಹೋವನು ಐಗುಪ್ತ್ಯರ ದೇವತೆಗಳನ್ನು ಶಿಕ್ಷಿಸಿ, ಐಗುಪ್ತ್ಯರ ಚೊಚ್ಚಲಮಕ್ಕಳನ್ನು ಸಂಹರಿಸಿದ್ದರಿಂದ ಅವರು ಆ ಮಕ್ಕಳ ಶವಗಳನ್ನು ಸಮಾಧಿಮಾಡುತ್ತಿದ್ದರು.
Kannada BSI Bible 2016
ಹೇಗಂದರೆ ಕರ್ತನು ಅವರಲ್ಲಿ ಸಮಸ್ತ ಚೊಚ್ಚಲಿನವರನ್ನು ಹೊಡೆದದ್ದರಿಂದ ಐಗುಪ್ತ್ಯರು ಹೂಣಿಡುತ್ತಿದ್ದರು; ಕರ್ತನು ಅವರ ದೇವರುಗಳಿಗೂ ತೀರ್ಪು ಮಾಡಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆ ಕಾಲದಲ್ಲಿ ಯೆಹೋವನು ಐಗುಪ್ತ್ಯರ ದೇವತೆಗಳನ್ನು ಶಿಕ್ಷಿಸಿ ಐಗುಪ್ತ್ಯರ ಚೊಚ್ಚಲುಮಕ್ಕಳನ್ನು ಸಂಹರಿಸಿದದರಿಂದ ಅವರು ಆ ಮಕ್ಕಳ ಶವಗಳನ್ನು ಸಮಾಧಿಮಾಡುತ್ತಿದ್ದರು.
Kannada Bible (KNCL) BSI 2016
ಆ ಕಾಲದಲ್ಲಿ ಸರ್ವೇಶ್ವರ ಸ್ವಾಮಿ ಈಜಿಪ್ಟರ ದೇವತೆಗಳನ್ನು ದಂಡಿಸಿ ಈಜಿಪ್ಟರ ಚೊಚ್ಚಲು ಮಕ್ಕಳನ್ನು ಸಂಹರಿಸಿದ್ದರು. ಆ ಮಕ್ಕಳ ಶವಗಳನ್ನು ಸಮಾಧಿ ಮಾಡಲಾಗುತ್ತಿತ್ತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಹೇಗೆಂದರೆ ಆ ಕಾಲದಲ್ಲಿ ಯೆಹೋವ ದೇವರು ಈಜಿಪ್ಟಿನವರ ಸಮಸ್ತ ಚೊಚ್ಚಲಿನವರನ್ನು ಹೊಡೆದು ಆ ಮಕ್ಕಳ ಶವಗಳನ್ನು ಹೂಣಿಟ್ಟರು, ಯೆಹೋವ ದೇವರು ಅವರ ದೇವರುಗಳಿಗೂ ಶಿಕ್ಷೆ ಮಾಡಿದರು.