Numbers 34:3 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ದಕ್ಷಿಣಭಾಗವು ಎದೋಮಿನ ಗಡಿಯಲ್ಲಿರುವ ಚಿನ್ ಮರುಭೂಮಿಯನ್ನು ಒಳಗೊಂಡಿದೆ. ಪೂರ್ವದ ಕಡೆಯಿರುವ ದಕ್ಷಿಣ ಗಡಿಯು ಉಪ್ಪುಸಮುದ್ರದ ದಕ್ಷಿಣಭಾಗದಿಂದ ಆರಂಭವಾಗುತ್ತದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀವು ಅಲ್ಲಿ ಸೇರಿದಾಗ ಎದೋಮ್ಯರ ಗಡಿಗಳ ಬಳಿಯಲ್ಲಿರುವ ಚಿನ್ ಅರಣ್ಯವು ನಿಮ್ಮ ದಕ್ಷಿಣದ ಮೇರೆಯಾಗಿರಬೇಕು. ಆ ಮೇರೆಯ ಪೂರ್ವದಿಕ್ಕಿನಲ್ಲಿರುವ ಲವಣಸಮುದ್ರದ ಕೊನೆಯಿಂದ ಪ್ರಾರಂಭಿಸಬೇಕು.
Kannada BSI Bible 2016
ಹೇಗೆ ಅಂದರೆ ನಿಮ್ಮ ದಕ್ಷಿಣ ಕಡೆಯು ಜಿನ್‌ ಅರಣ್ಯದಿಂದ ಎದೋಮಿಗೆ ಅನುಸಾರವಾಗಿರಬೇಕು; ನಿಮ್ಮ ದಕ್ಷಿಣ ಮೇರೆಯು ಉಪ್ಪಿನ ಸಮುದ್ರದ ಪೂರ್ವದ ಕಡೆಯಿಂದ ಆರಂಭಿಸಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀವು ಅಲ್ಲಿ ಸೇರಿದಾಗ ಎದೋಮ್ಯರ ಸರಹದ್ದಿನ ಬಳಿಯಲ್ಲಿರುವ ಚಿನ್ ಅರಣ್ಯವೇ ನಿಮ್ಮ ದಕ್ಷಿಣ ಮೇರೆಯಾಗಿರಬೇಕು. ಆ ಮೇರೆಯು ಮೂಡಣದಿಕ್ಕಿನಲ್ಲಿ ಲವಣ ಸಮುದ್ರದ ಕೊನೆಯಿಂದ ತೊಡಗಿ
Kannada Bible (KNCL) BSI 2016
ನೀವು ಅಲ್ಲಿ ಸೇರಿದಾಗ ಎದೋಮ್ಯರ ಸರಹದ್ದಿನ ಬಳಿಯಿರುವ ಚಿನ್ ಮರುಭೂಮಿಯೇ ನಿಮ್ಮ ದಕ್ಷಿಣ ಮೇರೆಯಾಗಿರಬೇಕು. ಆ ಮೇರೆ ಮೂಡಣ ದಿಕ್ಕಿನಲ್ಲಿ ಲವಣಸಮುದ್ರದ ಕೊನೆಯಿಂದ ತೊಡಗುವುದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ ‘ನಿಮ್ಮ ದಕ್ಷಿಣ ಕಡೆಯು ಚಿನ್ ಮರುಭೂಮಿಯಿಂದ ಎದೋಮಿಗೆ ಅನುಸಾರವಾಗಿರಬೇಕು. ನಿಮ್ಮ ದಕ್ಷಿಣ ಮೇರೆಯು, ಉಪ್ಪಿನ ಸಮುದ್ರದ ಪೂರ್ವದ ಕಡೆಯಿಂದ ಆರಂಭಿಸಬೇಕು.