Numbers 35:8 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನೀವು ಇತರ ಇಸ್ರೇಲರ ಆಸ್ತಿಯಿಂದ ಲೇವಿಯರಿಗೆ ಪಟ್ಟಣಗಳನ್ನು ಕೊಡುವಾಗ, ಪ್ರತಿಯೊಂದು ಕುಲವು ಹೊಂದಿರುವ ಭೂಮಿಗನುಸಾರವಾಗಿ ಕೊಡಬೇಕು. ದೊಡ್ಡಕುಲಗಳಿಂದ ಹೆಚ್ಚು ಪಟ್ಟಣಗಳನ್ನೂ ಚಿಕ್ಕಕುಲಗಳಿಂದ ಕೆಲವು ಪಟ್ಟಣಗಳನ್ನೂ ತೆಗೆದುಕೊಳ್ಳಿ.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇಸ್ರಾಯೇಲರ ಸ್ವತ್ತಿನಲ್ಲಿ ಆಯಾ ಕುಲದ ಸ್ವತ್ತಿನ ಪ್ರಮಾಣಕ್ಕೆ ತಕ್ಕ ಹಾಗೆ ಹೆಚ್ಚಾದ ಜನರುಳ್ಳವರಿಂದ ಹೆಚ್ಚಾಗಿಯೂ, ಕಡಿಮೆಯಾದ ಜನರಿಂದ ಕಡಿಮೆಯಾಗಿಯೂ ಲೇವಿಯರಿಗೋಸ್ಕರ ಊರುಗಳನ್ನು ಕೊಡಿಸಬೇಕು.”
Kannada BSI Bible 2016
ನೀವು ಇಸ್ರಾಯೇಲ್‌ ಮಕ್ಕಳ ಸ್ವಾಸ್ತ್ಯದಿಂದ ಕೊಡುವ ಪಟ್ಟಣಗಳನ್ನು ಹೆಚ್ಚಾದವರ ಕಡೆಯಿಂದ ಹೆಚ್ಚಾಗಿ ತಕ್ಕೊಳ್ಳಬೇಕು; ಕಡಿಮೆಯಾದವರ ಕಡೆಯಿಂದ ಕಡಿಮೆಯಾಗಿ ತಕ್ಕೊಳ್ಳಬೇಕು; ಒಬ್ಬೊಬ್ಬನು ತಾನು ಹೊಂದುವ ಸ್ವಾಸ್ತ್ಯಕ್ಕನುಸಾರವಾಗಿ ತನ್ನ ಪಟ್ಟಣ ಗಳೊಳಗಿಂದ ಲೇವಿಯರಿಗೆ ಕೊಡಬೇಕು ಎಂದು ಹೇಳಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇಸ್ರಾಯೇಲ್ಯರ ಸ್ವಾಸ್ತ್ಯದಲ್ಲಿ ಆಯಾ ಕುಲದ ಸ್ವಾಸ್ತ್ಯದ ಪ್ರಮಾಣಕ್ಕೆ ತಕ್ಕ ಹಾಗೆ ಅಂದರೆ ಹೆಚ್ಚಾದ ಮಂದಿಯುಳ್ಳವರಿಂದ ಹೆಚ್ಚಾಗಿಯೂ ಕಡಿಮೆಯಾದ ಮಂದಿಯುಳ್ಳವರಿಂದ ಕಡಿಮೆಯಾಗಿಯೂ ಲೇವಿಯರಿಗೋಸ್ಕರ ಊರುಗಳನ್ನು ಕೊಡಿಸಬೇಕು.
Kannada Bible (KNCL) BSI 2016
ಇಸ್ರಯೇಲರ ಸೊತ್ತಿನಲ್ಲಿ ಆಯಾ ಕುಲದ ಸೊತ್ತಿನ ಅಳತೆಗೆ ತಕ್ಕಹಾಗೆ, ಅಂದರೆ ಹೆಚ್ಚು ಉಳ್ಳವರಿಂದ ಹೆಚ್ಚಾಗಿಯೂ ಕಡಿಮೆ ಉಳ್ಳವರಿಂದ ಕಡಿಮೆಯಾಗಿಯೂ ಲೇವಿಯರಿಗೆ ಊರುಗಳನ್ನು ಕೊಡಿಸಬೇಕು.”
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೀವು ಇಸ್ರಾಯೇಲರ ಸ್ವಾಧೀನದಿಂದ ಕೊಡುವ ಪಟ್ಟಣಗಳನ್ನು ಹೆಚ್ಚಾದವರ ಕಡೆಯಿಂದ ಹೆಚ್ಚಾಗಿ, ಕಡಿಮೆಯಾದವರ ಕಡೆಯಿಂದ ಕಡಿಮೆಯಾಗಿ ತೆಗೆದುಕೊಳ್ಳಬೇಕು. ಒಬ್ಬೊಬ್ಬನು ತಾನು ಹೊಂದುವ ಸೊತ್ತಿಗನುಸಾರವಾಗಿ ತನ್ನ ಪಟ್ಟಣಗಳೊಳಗಿಂದ ಲೇವಿಯರಿಗೆ ಕೊಡಬೇಕು,” ಎಂದು ಹೇಳಿದರು.