Numbers 36:3 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಹೀಗಿರಲು ಅವರು ಇಸ್ರೇಲರ ಬೇರೆ ಯಾವ ಕುಲದವರನ್ನಾದರೂ ಮದುವೆಯಾದರೆ ಅವರ ಸ್ವಾಸ್ತ್ಯವು ನಮ್ಮ ಪೂರ್ವಿಕರ ಕುಲದಿಂದ ತೆಗೆಯಲ್ಪಟ್ಟು, ಅವರು ಮದುವೆಯ ಮೂಲಕ ಸೇರಿಕೊಳ್ಳುವ ಕುಲಕ್ಕೆ ಹೋಗುವುದು. ಇದರಿಂದ ನಮ್ಮ ಸ್ವಾಸ್ತ್ಯಕ್ಕೆ ನಷ್ಟವುಂಟಾಗುವುದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಹೀಗಿರಲು ಅವರು ಇಸ್ರಾಯೇಲರ ಬೇರೆ ಕುಲದವರಿಗೆ ಮದುವೆಯಾದ ಪಕ್ಷಕ್ಕೆ ಅವರ ಸ್ವತ್ತು ನಮ್ಮ ಕುಲದಿಂದ ತೆಗೆಯಲ್ಪಟ್ಟು ಅವರು ಸೇರಿಕೊಳ್ಳುವ ಕುಲಕ್ಕೆ ಹೋಗುವುದು. ಆದುದರಿಂದ ನಮ್ಮ ಸ್ವತ್ತಿಗೆ ನಷ್ಟವುಂಟಾಗುವುದು.
Kannada BSI Bible 2016
ಆದರೆ ಅವರು ಇಸ್ರಾಯೇಲ್ ಮಕ್ಕಳ ಗೋತ್ರಗಳ ಮಕ್ಕಳಲ್ಲಿ ಒಬ್ಬರಿಗೆ ಮದುವೆ ಯಾದರೆ ಅವರ ಸ್ವಾಸ್ತ್ಯವು ನಮ್ಮ ಪಿತೃಗಳ ಸ್ವಾಸ್ತ್ಯ ದಿಂದ ಕಡಿಮೆಯಾಗಿ ಅವರನ್ನು ಮದುವೆಮಾಡಿಕೊಂಡ ಗೋತ್ರದವರ ಸ್ವಾಸ್ತ್ಯಕ್ಕೆ ಕೂಡಿಸಲ್ಪಡುವದು; ಮತ್ತು ನಮ್ಮ ಸ್ವಾಸ್ತ್ಯದ ಭಾಗದಿಂದ ಅದು ಕಡಿಮೆಯಾಗಿ ಹೋಗುವದು.
Kannada BSI JV (ಕನ್ನಡ ಸತ್ಯವೇದವು J.V. (BSI))
ಹೀಗಿರಲು ಅವರು ಇಸ್ರಾಯೇಲ್ಯರ ಬೇರೆ ಕುಲದವರಿಗೆ ಮದುವೆಯಾದ ಪಕ್ಷಕ್ಕೆ ಅವರ ಸ್ವಾಸ್ತ್ಯವು ನಮ್ಮ ಕುಲದಿಂದ ತೆಗೆಯಲ್ಪಟ್ಟು ಅವರು ಸೇರಿಕೊಳ್ಳುವ ಕುಲಕ್ಕೆ ಹೋಗುವದು. ಇದರಿಂದ ನಮ್ಮ ಸ್ವಾಸ್ತ್ಯಕ್ಕೆ ನಷ್ಟವುಂಟಾಗುವದು.
Kannada Bible (KNCL) BSI 2016
ಹೀಗಿರಲು ಆ ಹೆಣ್ಣುಮಕ್ಕಳು ಇಸ್ರಯೇಲರ ಬೇರೆ ಕುಲದವರಿಗೆ ಮದುವೆಯಾದರೆ ಅವರು ಸೇರಿಕೊಳ್ಳುವ ಕುಲಕ್ಕೆ ಹೋಗುತ್ತದೆ. ಇದರಿಂದ ನಮ್ಮ ಸೊತ್ತಿಗೆ ನಷ್ಟ ಉಂಟಾಗುತ್ತದೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಅವರು ಇಸ್ರಾಯೇಲರ ಬೇರೆ ಗೋತ್ರದವರಿಗೆ ಮದುವೆಯಾದರೆ, ಅವರ ಸೊತ್ತು ಅಂದರೆ, ನಮ್ಮ ಪಿತೃಗಳ ಸೊತ್ತಿನಿಂದ ಅವರನ್ನು ಮದುವೆಮಾಡಿಕೊಂಡ ಗೋತ್ರದವರಿಗೆ ಸೊತ್ತು ಹೋಗುತ್ತದೆ. ಇದರಿಂದ ನಮ್ಮ ಸೊತ್ತಿನ ಭಾಗ ಕಡಿಮೆಯಾಗಿ ಹೋಗುವುದು.