Numbers 4:30 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ದೇವದರ್ಶನಗುಡಾರದ ಸೇವೆಯ ದಳದಲ್ಲಿ ಕೆಲಸಮಾಡಲು ಯೋಗ್ಯರಾದ ಗಂಡಸರನ್ನು ಲೆಕ್ಕಿಸು. ಅವರ ವಯಸ್ಸು ಮೂವತ್ತರಿಂದ ಮೊದಲುಗೊಂಡು ಐವತ್ತರೊಳಗಿರಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಮೂವತ್ತರಿಂದ ಐವತ್ತು ವರ್ಷದವರೆಗೂ ವಯಸ್ಸುಳ್ಳ ದೇವದರ್ಶನದ ಗುಡಾರದ ಸೇವೆ ಮಾಡಲು ಅರ್ಹರಾದವರನ್ನು ಲೆಕ್ಕಿಸಬೇಕು.
Kannada BSI Bible 2016
ಮೂವತ್ತು ವರುಷವು ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರನ್ನು ಅಂದರೆ ಐವತ್ತು ವರುಷಗಳ ವರೆಗೆ ಸಭೆಯ ಗುಡಾರದ ಸೇವೆಮಾಡುವ ದಕ್ಕಾಗಿ ಒಳಗೆ ಪ್ರವೇಶಿಸುವವರನ್ನೆಲ್ಲಾ ಎಣಿಸಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ದೇವದರ್ಶನದ ಗುಡಾರದ ಸೇವಕಮಂಡಲಿಗೆ ಸೇರತಕ್ಕವರಾಗಿದ್ದಾರೋ ಅವರನ್ನು ಗೋತ್ರಕುಟುಂಬಗಳ ಪ್ರಕಾರ ಲೆಕ್ಕಿಸಬೇಕು.
Kannada Bible (KNCL) BSI 2016
ದೇವದರ್ಶನದ ಗುಡಾರದ ಸೇವೆಮಾಡಲು ಯೋಗ್ಯರಾಗಿದ್ದಾರೋ ಅವರನ್ನು ಗೋತ್ರಕುಟುಂಬಗಳ ಪ್ರಕಾರ ಎಣಿಕೆಮಾಡು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಮೂವತ್ತು ವರುಷವೂ, ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಪುರುಷರನ್ನೂ ಅಂದರೆ ಐವತ್ತು ವರ್ಷಗಳವರೆಗೆ ದೇವದರ್ಶನದ ಗುಡಾರದ ಸೇವೆ ಮಾಡುವುದಕ್ಕಾಗಿ ಒಳಗೆ ಪ್ರವೇಶಿಸುವವರನ್ನೆಲ್ಲಾ ಎಣಿಸಬೇಕು.