Numbers 4:37 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೆಹೋವನು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಮೋಶೆ ಆರೋನರು ಕೆಹಾತ್ಯರನ್ನು ಲೆಕ್ಕಿಸಲಾಗಿ ಅವರಲ್ಲಿ ದೇವದರ್ಶನಗುಡಾರಕ್ಕೆ ಸಂಬಂಧಪಟ್ಟ ಕೆಲಸವನ್ನು ಮಾಡತಕ್ಕವರು ಇವರೇ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋವನು ಮೋಶೆಗೆ ಕೊಟ್ಟ ಅಪ್ಪಣೆಯ ಮೇರೆಗೆ ಮೋಶೆ ಆರೋನರು ಕೆಹಾತ್ಯರ ಗೋತ್ರಕುಟುಂಬವನ್ನು ಲೆಕ್ಕಿಸಲಾಗಿ ಅವರಲ್ಲಿ ದೇವದರ್ಶನದ ಗುಡಾರದ ಕೆಲಸವನ್ನು ಮಾಡತಕ್ಕವರು ಇಷ್ಟೇ ಜನರು.
Kannada BSI Bible 2016
ಮೋಶೆಗೆ ಕರ್ತನು ಅಪ್ಪಣೆ ಮಾಡಿದ ಹಾಗೆ ಮೋಶೆಯೂ ಆರೋನನೂ ಎಣಿಸದ ಕೆಹಾತಿಯರ ಕುಟುಂಬಗಳಲ್ಲಿ ಎಣಿಸಲ್ಪಟ್ಟವರೂ ಸಭೆಯ ಗುಡಾರದಲ್ಲಿ ಸೇವೆಮಾಡುವವರೆಲ್ಲರೂ ಇವರೇ.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೋವನು ಮೋಶೆಗೆ ಕೊಟ್ಟ ಅಪ್ಪಣೆಯ ಮೇರೆಗೆ ಮೋಶೆ ಆರೋನರು ಕೆಹಾತ್ಯರನ್ನು ಲೆಕ್ಕಿಸಲಾಗಿ ಅವರಲ್ಲಿ ದೇವದರ್ಶನದ ಗುಡಾರದ ಕೆಲಸವನ್ನು ಮಾಡತಕ್ಕವರು ಇಷ್ಟೇ ಜನ.
Kannada Bible (KNCL) BSI 2016
ಸರ್ವೇಶ್ವರ ಮೋಶೆಗೆ ಕೊಟ್ಟ ಆಜ್ಞೆಯಂತೆ ಕೆಹಾತ್ಯರನ್ನು ಮೋಶೆ - ಆರೋನರು ಎಣಿಕೆಮಾಡಿದಾಗ ದೇವದರ್ಶನದ ಗುಡಾರದ ಸೇವೆಗೆ ಯೋಗ್ಯರಾಗಿದ್ದವರು ಇಷ್ಟೇ ಜನ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಮೋಶೆಗೆ ಯೆಹೋವ ದೇವರು ಅಪ್ಪಣೆ ಮಾಡಿದ ಹಾಗೆ ಮೋಶೆಯೂ, ಆರೋನನೂ ಎಣಿಸಿದ ಕೊಹಾತ್ಯರ ಕುಟುಂಬಗಳಲ್ಲಿ ಎಣಿಕೆಯಾದವರೂ, ದೇವದರ್ಶನ ಗುಡಾರದಲ್ಲಿ ಸೇವೆ ಮಾಡುವವರೆಲ್ಲರೂ ಇವರೇ.