Numbers 4:5 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ಇಸ್ರೇಲರು ಹೊಸ ಸ್ಥಳಕ್ಕೆ ಪ್ರಯಾಣ ಮಾಡುವಾಗ ಆರೋನನೂ ಅವನ ಪುತ್ರರೂ ದೇವದರ್ಶನಗುಡಾರದೊಳಕ್ಕೆ ಹೋಗಿ, ಮಹಾ ಪವಿತ್ರ ಸ್ಥಳವನ್ನು ಮರೆಮಾಡುವ ತೆರೆಯನ್ನು ಇಳಿಸಿ, ಅದನ್ನು ಒಡಂಬಡಿಕೆಯ ಪವಿತ್ರ ಪೆಟ್ಟಿಗೆಗೆ ಹೊದಿಸಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ದಂಡು ಹೊರಡುವಾಗ, ಆರೋನನೂ ಮತ್ತು ಅವನ ಮಕ್ಕಳೂ ಒಳಗೆ ಬಂದು ಮಹಾಪವಿತ್ರಸ್ಥಾನವನ್ನು ಮರೆಮಾಡುವ ತೆರೆಯನ್ನು ಇಳಿಸಿ ಅದರಿಂದ ಮಂಜೂಷದ ಆಜ್ಞಾಶಾಸನವನ್ನು ಮುಚ್ಚಿಬಿಟ್ಟು,
Kannada BSI Bible 2016
ಪಾಳೆಯವು ಹೊರಡು ವಾಗ ಆರೋನನೂ ಅವನ ಮಕ್ಕಳೂ ಒಳಗೆ ಹೋಗಿ ತೆರೆಯನ್ನು ಇಳಿಸಿ ಅದರಿಂದ ಸಾಕ್ಷಿಯ ಮಂಜೂಷವನ್ನು ಮುಚ್ಚಿ
Kannada BSI JV (ಕನ್ನಡ ಸತ್ಯವೇದವು J.V. (BSI))
ದಂಡು ಹೊರಡುವಾಗ ಆರೋನನೂ ಅವನ ಮಕ್ಕಳೂ ಒಳಗೆ ಬಂದು [ಮಹಾಪವಿತ್ರಸ್ಥಾನವನ್ನು] ಮರೆಮಾಡುವ ತೆರೆಯನ್ನು ಇಳಿಸಿ ಅದರಿಂದ ಆಜ್ಞಾಶಾಸನಗಳ ಮಂಜೂಷವನ್ನು ಮುಚ್ಚಿಬಿಟ್ಟು
Kannada Bible (KNCL) BSI 2016
ದಂಡು ಹೊರಡುವಾಗ ಆರೋನನು ಮತ್ತು ಅವನ ಮಕ್ಕಳು ಒಳಗೆ ಬಂದು ಗರ್ಭಗುಡಿಯನ್ನು ಮರೆಮಾಡುವ ತೆರೆಯನ್ನು ಇಳಿಸಿ ಅದರಿಂದ ಆಜ್ಞಾಶಾಸನಗಳ ಮಂಜೂಷವನ್ನು ಮುಚ್ಚಬೇಕು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಜನರು ಹೊರಡುವಾಗ, ಆರೋನನೂ, ಅವನ ಮಕ್ಕಳೂ ಒಳಗೆ ಹೋಗಿ ಪರದೆಯನ್ನು ಇಳಿಸಿ, ಅದರಿಂದ ಒಡಂಬಡಿಕೆಯ ಮಂಜೂಷವನ್ನು ಮುಚ್ಚಿ,