Numbers 6:5 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ಅವನ ವ್ರತದ ಕಾಲದಲ್ಲಿ ಕ್ಷೌರದ ಕತ್ತಿಯು ಅವನ ತಲೆಯನ್ನು ಸೋಂಕಬಾರದು. ಯೆಹೋವನಿಗೋಸ್ಕರ ಪ್ರತಿಷ್ಠಿತವಾದ ತನ್ನ ಕಾಲವನ್ನು ಪೂರ್ಣಗೊಳಿಸುವ ತನಕ ಅವನು ಪರಿಶುದ್ಧನಾಗಿರಬೇಕು. ತನ್ನ ವ್ರತದ ದಿನಗಳು ಮುಗಿಯುವ ತನಕ ಅವನು ಕೂದಲನ್ನು ಬೆಳೆಸಿಕೊಳ್ಳಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ಅವನು ತನ್ನ ಹರಕೆಯ ದಿನಗಳಲ್ಲಿ ಕ್ಷೌರಮಾಡಿಸಿಕೊಳ್ಳಬಾರದು. ಅವನು ತನ್ನನ್ನು ಯೆಹೋವನಿಗೆ ಪ್ರತಿಷ್ಠಿಸಿಕೊಂಡ ದಿನಗಳು ಮುಗಿಯುವ ತನಕ ತಾನು ದೇವರಿಗೆ ಮೀಸಲಾಗಿದ್ದು ತನ್ನ ತಲೆಯ ಕೂದಲನ್ನು ಕತ್ತರಿಸದೆ ಬಿಡಬೇಕು.
Kannada BSI Bible 2016
ಅವನ ನಾಜೀರತನ ಪ್ರಮಾಣದ ದಿವಸಗಳೆಲ್ಲಾ ಕ್ಷೌರ ಕತ್ತಿ ಅವನ ತಲೆಯ ಮೇಲೆ ಬರಬಾರದು; ಅವನು ಕರ್ತನಿಗೆ ತನ್ನನ್ನು ಪ್ರತ್ಯೇಕಿಸಿಕೊಂಡ ದಿವಸ ಗಳು ಪೂರ್ತಿಯಾಗುವ ವರೆಗೆ ಅವನು ಪರಿಶುದ್ಧನಾಗಿ ರುವನು; ಅವನು ತನ್ನ ತಲೆಯ ಕೂದಲನ್ನು ಬೆಳೆಸ ಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನು ತನ್ನ ಹರಕೆಯ ದಿನಗಳಲ್ಲೆಲ್ಲಾ ಕ್ಷೌರಮಾಡಿಸಿಕೊಳ್ಳಬಾರದು. ಅವನು ತನ್ನನ್ನು ಯೆಹೋವನಿಗೆ ಪ್ರತಿಷ್ಠಿಸಿಕೊಂಡ ದಿನಗಳು ಮುಗಿಯುವ ತನಕ ತಾನು ಮೀಸಲಾಗಿದ್ದು ತನ್ನ ತಲೆಯ ಕೂದಲನ್ನು ಕತ್ತರಿಸದೆ ಬಿಡಬೇಕು.
Kannada Bible (KNCL) BSI 2016
ಅವನು ತನ್ನ ವ್ರತ ದಿನಗಳಲ್ಲೆಲ್ಲಾ ಕ್ಷೌರ ಮಾಡಿಸಿಕೊಳ್ಳಬಾರದು. ತನ್ನನ್ನೇ ಪ್ರತಿಷ್ಠಿಸಿಕೊಂಡ ದಿನಗಳು ಮುಗಿಯುವ ತನಕ ವ್ರತಬದ್ಧನಾಗಿದ್ದು ತನ್ನ ತಲೆಯ ಕೂದಲನ್ನು ಕತ್ತರಿಸದೆ ಬೆಳೆಯಬಿಡಬೇಕು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ ‘ಅವರ ನಾಜೀರ ವ್ರತದ ದಿನಗಳಲ್ಲೆಲ್ಲಾ ಕ್ಷೌರಮಾಡಿಸಿಕೊಳ್ಳಬಾರದು. ಅವರು ಯೆಹೋವ ದೇವರಿಗೆ ತಮ್ಮನ್ನು ಪ್ರತ್ಯೇಕಿಸಿಕೊಂಡ ದಿವಸಗಳು ಪೂರ್ತಿಯಾಗುವವರೆಗೆ ಅವರು ಪರಿಶುದ್ಧರಾಗಿರುವರು, ಅವರು ತಮ್ಮ ತಲೆಗೂದಲನ್ನು ಕತ್ತರಿಸದೇ ಬೆಳೆಯಬಿಡಬೇಕು.