Numbers 7:13 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
See verse 12
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವನು ತಂದ ಕಾಣಿಕೆ: ದೇವಸ್ಥಾನದ ನಾಣ್ಯ ತೂಕದ ಮೇರೆಗೆ ನೂರ ಮೂವತ್ತು ಶೆಕೆಲ್ ತೂಕದ ಒಂದು ಬೆಳ್ಳಿಯ ತಟ್ಟೆ. ಎಪ್ಪತ್ತು ಶೆಕೆಲ್ ತೂಕದ ಒಂದು ಬೆಳ್ಳಿಯ ಬಟ್ಟಲು; ಈ ಎರಡರಲ್ಲಿಯೂ ಧಾನ್ಯನೈವೇದ್ಯಕ್ಕಾಗಿ ಎಣ್ಣೆ ಬೆರಸಿದ ಗೋದಿಯ ಹಿಟ್ಟು ತುಂಬಿತ್ತು.
Kannada BSI Bible 2016
ಅವನ ಅರ್ಪಣೆ ಏನಂದರೆ,--ನೂರಮೂವತ್ತು ಶೇಕೆಲಿನಷ್ಟು ತೂಕವಾದ ಬೆಳ್ಳಿಯ ಒಂದು ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲ್‌ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರದ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನ ಕಾಣಿಕೆಯು ಯಾವದಂದರೆ - ದೇವರ ಸೇವೆಗೆ ನೇಮಕವಾದ ರೂಪಾಯಿಯ ತೂಕದ ಮೇರೆಗೆ ನೂರ ಮೂವತ್ತು ರೂಪಾಯಿ ತೂಕದ ಬೆಳ್ಳಿಯ ಹರಿವಾಣವು; ಎಪ್ಪತ್ತು ತೊಲೆ ತೂಕವುಳ್ಳ ಬೆಳ್ಳಿಯ ಬಟ್ಟಲು; ಈ ಎರಡರಲ್ಲಿಯೂ ನೈವೇದ್ಯಕ್ಕಾಗಿ ಎಣ್ಣೆ ಬೆರಸಿದ ಗೋದಿಯ ಹಿಟ್ಟು ತುಂಬಿತ್ತು;
Kannada Bible (KNCL) BSI 2016
ಅವನು ತಂದ ಕಾಣಿಕೆಗಳು: ದೇವಸ್ಥಾನದ ನಾಣ್ಯತೂಕದ ಮೇರೆಗೆ 130 ಶೆಕೆಲ್ ತೂಕದ ಬೆಳ್ಳಿಯ ಒಂದು ಹರಿವಾಣ; 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು; ಈ ಎರಡರ ತುಂಬ ನೈವೇದ್ಯಕ್ಕಾಗಿ ಎಣ್ಣೆಬೆರೆಸಿದ ಗೋದಿಯ ಹಿಟ್ಟು
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನ ಅರ್ಪಣೆ ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಚೊಕ್ಕ ಬೆಳ್ಳಿಯ ಒಂದು ತಟ್ಟೆ ಮತ್ತು 70 ಶೆಕೆಲ್ ತೂಕದ ಬೆಳ್ಳಿಯ ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಇವೆರಡು ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.