Numbers 7:2 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಬಳಿಕ ಇಸ್ರೇಲಿನ ಪ್ರಧಾನ ಪುರುಷರು, ಅವರ ಕುಟುಂಬಗಳ ನಾಯಕರು ಅಂದರೆ ಜನಗಣತಿಯ ಮೇಲ್ವಿಚಾರಣೆಯನ್ನು ಸಹ ವಹಿಸಿಕೊಂಡಿದ್ದ
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ದಿನದಲ್ಲಿ ಇಸ್ರಾಯೇಲರ ಪ್ರಧಾನ ಪುರುಷರು ಅಂದರೆ ಗೋತ್ರದ ಪ್ರಮುಖರು, ಕುಲಾಧಿಪತಿಗಳು, ಜನಗಣತಿಯ ನೇತೃತ್ವವನ್ನು ವಹಿಸಿಕೊಂಡಿದ್ದವರು ಕಾಣಿಕೆಗಳನ್ನು ತಂದು ಸಮರ್ಪಿಸಿದರು.
Kannada BSI Bible 2016
ಇಸ್ರಾಯೇಲ್ಯರ ಪ್ರಧಾನರೂ ತಮ್ಮ ತಂದೆಗಳ ಮನೆಯ ಮುಖ್ಯಸ್ಥರೂ ಗೋತ್ರಗಳ ಮುಖ್ಯಾಧಿಕಾರಿಗಳೂ ಎಣಿಸಲ್ಪಟ್ಟವರ ಮೇಲೆ ಇದ್ದ ವರು ಅರ್ಪಿಸಿದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇಸ್ರಾಯೇಲ್ಯರ ಪ್ರಧಾನಪುರುಷರು ಅಂದರೆ ಗೋತ್ರಪ್ರಮುಖರಾಗಿದ್ದು ಕುಲಾಧಿಪತಿಗಳಾಗಿಯೂ ಲೆಕ್ಕಿಸಲ್ಪಟ್ಟ ಭಟರ ಮೇಲೆ ನಾಯಕರಾಗಿಯೂ ಇದ್ದವರು ಕಾಣಿಕೆಗಳನ್ನು ತಂದು ಸಮರ್ಪಿಸಿದರು.
Kannada Bible (KNCL) BSI 2016
ಆಗ ಇಸ್ರಯೇಲರ ಮುಖ್ಯಸ್ಥರು, ಅಂದರೆ ಗೋತ್ರನಾಯಕರು ಹಾಗೂ ಕುಲಾಧಿಪತಿಗಳಾಗಿದ್ದು ಜನಗಣತಿಯ ನೇತೃತ್ವವನ್ನು ವಹಿಸಿಕೊಂಡಿದ್ದವರು, ಕಾಣಿಕೆಗಳನ್ನು ತಂದೊಪ್ಪಿಸಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇಸ್ರಾಯೇಲರ ಪ್ರಧಾನರು ಎಂದರೆ ಗೋತ್ರದ ಪ್ರಮುಖರು, ಕುಲಾಧಿಪತಿಗಳು ಜನಗಣತಿಯ ನೇತೃತ್ವವನ್ನು ವಹಿಸಿಕೊಂಡಿದ್ದವರು ಕಾಣಿಕೆಗಳನ್ನು ತಂದು ಸಮರ್ಪಿಸಿದರು.