Numbers 7:5 — Compare Translations
5 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ಪ್ರಧಾನರಿಂದ ಈ ಕಾಣಿಕೆಗಳನ್ನು ಸ್ವೀಕರಿಸು. ಇವು ದೇವದರ್ಶನಗುಡಾರದ ವರ್ಗಾವಣೆಗೆ ಉಪಯೋಗಿಸಲ್ಪಡಲಿ. ಇವುಗಳನ್ನು ಲೇವಿಯರಿಗೆ ಕೊಡು. ಅವರು ತಮ್ಮ ಕೆಲಸಗಳನ್ನು ಮಾಡಲು ಇದು ಸಹಾಯ ಮಾಡುವುದು.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ನೀನು ಇವರ ಕೈಯಿಂದ ಈ ಕಾಣಿಕೆಯ ವಸ್ತುಗಳನ್ನು ತೆಗೆದುಕೊಂಡು ದೇವದರ್ಶನದ ಗುಡಾರದ ಸೇವೆಗಾಗಿ ಉಪಯೋಗಿಸು. ಕಾಣಿಕೆಯನ್ನು ಲೇವಿಯರಿಗೆ ಅವರವರ ಕೆಲಸಕ್ಕೆ ತಕ್ಕ ಹಾಗೆ ಕೊಡಬೇಕು” ಎಂದು ಆಜ್ಞಾಪಿಸಿದನು.
Kannada BSI Bible 2016
ಅವುಗಳನ್ನು ಅವರಿಂದ ತೆಗೆದುಕೋ, ಅವು ಸಭೆಯ ಗುಡಾರದ ಸೇವೆಮಾಡುವದಕ್ಕೋಸ್ಕರ ಇರಬೇಕು.ಅವುಗಳನ್ನು ಲೇವಿಯರಿಗೆ ಅವನವನ ಸೇವೆಯ ಪ್ರಕಾರ ಕೊಡಬೇಕು ಅಂದನು.
Kannada Bible (KNCL) BSI 2016
“ಈ ಕಾಣಿಕೆಯ ವಸ್ತುಗಳನ್ನು ಇವರ ಕೈಯಿಂದ ತೆಗೆದುಕೋ; ಇವು ದೇವದರ್ಶನದ ಗುಡಾರದ ಸೇವೆಗೆ ಉಪಯೋಗವಾಗಲಿ. ಲೇವಿಯರಿಗೆ ಅವರವರ ಕೆಲಸಕ್ಕೆ ತಕ್ಕ ಹಾಗೆ ಅವುಗಳನ್ನು ಕೊಡು,” ಎಂದು ಆಜ್ಞಾಪಿಸಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಅವುಗಳನ್ನು ಅವರಿಂದ ತೆಗೆದುಕೋ, ಅವು ದೇವದರ್ಶನ ಗುಡಾರದ ಸೇವೆಮಾಡುವುದಕ್ಕೋಸ್ಕರ ಇರಬೇಕು. ಅವುಗಳನ್ನು ಲೇವಿಯರಿಗೆ ಅವನವನ ಕೆಲಸಕ್ಕೆ ತಕ್ಕಂತೆ ಕೊಡಬೇಕು,” ಎಂದರು.