Numbers 7:67 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
See verse 12
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವನು ತಂದ ಕಾಣಿಕೆ: ದೇವಸ್ಥಾನದ ನಾಣ್ಯ ತೂಕದ ಮೇರೆಗೆ ನೂರ ಮೂವತ್ತು ಶೆಕೆಲ್ ತೂಕದ ಒಂದು ಬೆಳ್ಳಿಯ ತಟ್ಟೆ; ಎಪ್ಪತ್ತು ಶೆಕಲ್ ತೂಕವುಳ್ಳ ಒಂದು ಬೆಳ್ಳಿಯ ಬಟ್ಟಲು; ಈ ಎರಡರಲ್ಲಿಯೂ ಧಾನ್ಯನೈವೇದ್ಯಕ್ಕಾಗಿ ಎಣ್ಣೆ ಬೆರಸಿದ ಗೋದಿಯ ಹಿಟ್ಟು ತುಂಬಿತ್ತು.
Kannada BSI Bible 2016
ಅವನ ಅರ್ಪಣೆಯು ಏನಂದರೆನೂರ ಮೂವತ್ತು ಶೇಕೆಲಿನಷ್ಟು ತೂಕದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯ ವಾದ ಹಿಟ್ಟಿನಿಂದ ತುಂಬಿದ್ದವು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನ ಕಾಣಿಕೆ ಯಾವದಂದರೆ - ದೇವರ ಸೇವೆಗೆ ನೇಮಕವಾದ ರೂಪಾಯಿಯ ತೂಕದ ಮೇರೆಗೆ ನೂರ ಮೂವತ್ತು ರೂಪಾಯಿ ತೂಕದ ಬೆಳ್ಳಿಯ ಹರಿವಾಣವು; ಎಪ್ಪತ್ತು ತೊಲೆ ತೂಕವುಳ್ಳ ಬೆಳ್ಳಿಯ ಬಟ್ಟಲು; ಈ ಎರಡರಲ್ಲಿಯೂ ನೈವೇದ್ಯಕ್ಕಾಗಿ ಎಣ್ಣೆ ಬೆರಸಿದ ಗೋದಿಯ ಹಿಟ್ಟು ತುಂಬಿತ್ತು;
Kannada Bible (KNCL) BSI 2016
ದೇವಸ್ಥಾನದ ನಾಣ್ಯತೂಕದ ಮೇರೆಗೆ 130 ಶೆಕೆಲ್ ತೂಕದ ಒಂದು ಹರಿವಾಣ, 70 ಶೆಕೆಲ್ ತೂಕದ ಒಂದು ಬೆಳ್ಳಿಯ ಬಟ್ಟಲು; ಈ ಎರಡರ ತುಂಬ ನೈವೇದ್ಯಕ್ಕಾಗಿ ಎಣ್ಣೆಬೆರೆಸಿದ ಗೋದಿಯ ಹಿಟ್ಟು
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನ ಅರ್ಪಣೆಯು ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.