Numbers 7:8 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಬಳಿಕ ಮೆರಾರೀಯರ ಕೆಲಸಕ್ಕೆ ಬೇಕಾಗಿದ್ದ ನಾಲ್ಕು ಬಂಡಿಗಳನ್ನೂ ನಾಲ್ಕು ಜೊತೆ ಎತ್ತುಗಳನ್ನೂ ಅವರಿಗೆ ಕೊಟ್ಟನು. ಇವರೆಲ್ಲರು ಮಾಡುವ ಕೆಲಸಕ್ಕೆ ಯಾಜಕನಾದ ಆರೋನನ ಮಗನಾದ ಈತಾಮಾರನು ಮೇಲ್ವಿಚಾರಕನಾಗಿದ್ದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಮೆರಾರೀ ಸಂತಾನದವರಿಗೆ ಅವರ ಕೆಲಸಕ್ಕೆ ತಕ್ಕ ಹಾಗೆ ನಾಲ್ಕು ಬಂಡಿಗಳನ್ನು ಮತ್ತು ನಾಲ್ಕು ಜೋಡಿ ಎತ್ತುಗಳನ್ನು ಮಹಾಯಾಜಕನಾದ ಆರೋನನ ಮಗನಾದ ಈತಾಮಾರನ ಕೈಗೆ ಒಪ್ಪಿಸಿದರು.
Kannada BSI Bible 2016
ಯಾಜಕನಾದ ಆರೋನನ ಮಗನಾದ ಈತಾಮಾರನ ಕೈಕೆಳಗಿರುವ ನಾಲ್ಕು ಬಂಡಿಗಳನ್ನೂ ಎಂಟು ಎತ್ತು ಗಳನ್ನೂ ಮೆರಾರೀಯ ಕುಮಾರರಿಗೆ ಅವರ ಸೇವೆಯ ಪ್ರಕಾರ ಕೊಟ್ಟನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಮೆರಾರೀಯರಿಗೋಸ್ಕರ ಅವರ ಕೆಲಸಕ್ಕೆ ತಕ್ಕ ಹಾಗೆ ನಾಲ್ಕು ಬಂಡಿ ನಾಲ್ಕು ಜೋಡಿ ಎತ್ತುಗಳನ್ನೂ ಮಹಾಯಾಜಕನಾದ ಆರೋನನ ಮಗ ಈತಾಮಾರನ ಕೈಗೆ ಒಪ್ಪಿಸಿದನು.
Kannada Bible (KNCL) BSI 2016
ನಾಲ್ಕು ಬಂಡಿ ಹಾಗೂ ಎಂಟು ಎತ್ತುಗಳನ್ನು ಮೆರಾರೀಯರಿಗೆ ಅವರವರ ಸೇವೆಗೆ ತಕ್ಕ ಹಾಗೆ ಕೊಟ್ಟನು. ಇವರು ಮಹಾಯಾಜಕ ಆರೋನನ ಮಗ ಈತಾಮಾರನ ಕೈಕೆಳಗೆ ಸೇವೆ ಮಾಡಬೇಕಾಗಿತ್ತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯಾಜಕನಾದ ಆರೋನನ ಮಗ ಈತಾಮಾರನ ಕೈಕೆಳಗಿರುವ ನಾಲ್ಕು ಬಂಡಿಗಳನ್ನೂ, ಎಂಟು ಎತ್ತುಗಳನ್ನೂ ಮೆರಾರೀಯ ಪುತ್ರರಿಗೆ ಅವರ ಕೆಲಸಕ್ಕೆ ತಕ್ಕಂತೆ ಕೊಟ್ಟನು.