Numbers 7:85 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಪ್ರತಿಯೊಂದು ಬೆಳ್ಳಿಯ ತಟ್ಟೆಯ ತೂಕ ಸುಮಾರು ಮೂರುಕಾಲು ಪೌಂಡುಗಳು, ಪ್ರತಿ ಬಟ್ಟಲು ಸುಮಾರು ಮೂರುಮುಕ್ಕಾಲು ಪೌಂಡು ತೂಕವುಳ್ಳದ್ದಾಗಿದ್ದವು. ಬೆಳ್ಳಿಯ ತಟ್ಟೆಗಳು ಮತ್ತು ಬೆಳ್ಳಿಯ ಬಟ್ಟಲುಗಳು ಒಟ್ಟಿಗೆ ಅಧಿಕೃತ ಅಳತೆಯ ಪ್ರಕಾರ ಅರವತ್ತು ಪೌಂಡುಗಳಷ್ಟು ತೂಕವಾಗಿದ್ದವು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಒಂದೊಂದು ಬೆಳ್ಳಿಯ ತಟ್ಟೆಯು 120 ಶೆಕೆಲ್ ತೂಕವುಳ್ಳದ್ದು, ಒಂದೊಂದು ಬಟ್ಟಲು 70 ಶೆಕೆಲ್ ತೂಕದ್ದು. ಆ ಬೆಳ್ಳಿಯ ಪಾತ್ರೆಗಳ ಒಟ್ಟು ತೂಕ ದೇವಸ್ಥಾನದ ನಾಣ್ಯ ತೂಕದ ಪ್ರಕಾರ 2,400 ಶೆಕೆಲ್.
Kannada BSI Bible 2016
ಬೆಳ್ಳಿಯ ಒಂದೊಂದು ತಟ್ಟೆಗಳ ತೂಕವು ನೂರ ಮೂವತ್ತು ಶೇಕೆಲು. ಒಂದೊಂದು ಬಟ್ಟಲಿಗೆ ಎಪ್ಪತ್ತು, ಬೆಳ್ಳಿಯ ಎಲ್ಲಾ ವಸ್ತುಗಳಿಗೆ ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎರಡು ಸಾವಿರದ ನಾಲ್ಕು ನೂರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಒಂದೊಂದು ಬೆಳ್ಳಿಯ ಹರಿವಾಣವು 130 ರೂಪಾಯಿ ತೂಕವುಳ್ಳದ್ದು; ಒಂದೊಂದು ಬಟ್ಟಲು 70 ರೂಪಾಯಿ ತೂಕದ್ದು. ಆ ಬೆಳ್ಳಿಯ ಪಾತ್ರೆಗಳ ಒಟ್ಟು ತೂಕ ದೇವರ ಸೇವೆಗೆ ನೇಮಕವಾದ ರೂಪಾಯಿಯ ಪ್ರಕಾರ 2,400 ರೂಪಾಯಿ.
Kannada Bible (KNCL) BSI 2016
ಒಂದೊಂದು ಬೆಳ್ಳಿಯ ಹರಿವಾಣ 130 ಶೆಕೆಲ್ ತೂಕವುಳ್ಳದ್ದಾಗಿತ್ತು; ಒಂದೊಂದು ಬೆಳ್ಳಿಯ ಬಟ್ಟಲು 70 ಶೆಕೆಲ್ ತೂಕವುಳ್ಳದ್ದಾಗಿತ್ತು; ಆ ಬೆಳ್ಳಿಯ ಪಾತ್ರೆಗಳ ಒಟ್ಟು ತೂಕ ದೇವಸ್ಥಾನದ ನಾಣ್ಯದ ತೂಕದ ಮೇರೆಗೆ 2400 ಶೆಕೆಲ್ ತೂಕ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಬೆಳ್ಳಿಯ ಒಂದೊಂದು ತಟ್ಟೆಗಳ ತೂಕವು 130 ಶೆಕೆಲ್, ಒಂದೊಂದು ಬಟ್ಟಲಿನ ತೂಕವು 70 ಶೆಕೆಲ್. ಬೆಳ್ಳಿಯ ಎಲ್ಲಾ ಸಾಮಗ್ರಿಗಳ ತೂಕ ಪರಿಶುದ್ಧಸ್ಥಳದ ನೇಮದ ಪ್ರಕಾರ 2,400 ಶೆಕೆಲ್.