Numbers 7:87 — Compare Translations

5 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಸರ್ವಾಂಗಹೋಮಕ್ಕಾಗಿ ಉಪಯೋಗಿಸಲ್ಪಟ್ಟ ಒಟ್ಟು ಪಶುಗಳು: ಹನ್ನೆರಡು ಹೋರಿಗಳು, ಹನ್ನೆರಡು ಟಗರುಗಳು, ಒಂದು ವರ್ಷದ ಎರಡು ಗಂಡು ಕುರಿಮರಿಗಳು. ಆ ಸಮರ್ಪಣೆಗಳೊಂದಿಗೆ ಧಾನ್ಯಸಮರ್ಪಣೆಗಳೂ ಅರ್ಪಿಸಲ್ಪಟ್ಟವು. ದೋಷಪರಿಹಾರಕ ಯಜ್ಞವಾಗಿ ಹನ್ನೆರಡು ಹೋತಗಳು ಯೆಹೋವನಿಗೆ ಸಮರ್ಪಿಸಲ್ಪಟ್ಟವು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಸರ್ವಾಂಗಹೋಮಕ್ಕಾಗಿ ಕೊಟ್ಟ ಒಟ್ಟು ಪಶುಗಳು: 12 ಹೋರಿಗಳು, 12 ಟಗರುಗಳು, ಒಂದು ವರ್ಷದ 12 ಕುರಿಗಳು ಇವುಗಳೊಂದಿಗೆ ಸಮರ್ಪಿಸಬೇಕಾದ ಧಾನ್ಯದ್ರವ್ಯವನ್ನೂ ಕೊಟ್ಟರು. ದೋಷಪರಿಹಾರಕ ಯಜ್ಞಕ್ಕಾಗಿ ಕೊಟ್ಟದ್ದು 12 ಹೋತಗಳು.
Kannada BSI Bible 2016
ದಹನ ಬಲಿಗಾಗಿ ಇರುವ ಹೋರಿಗಳು ಹನ್ನೆರಡು, ಟಗರು ಗಳು ಹನ್ನೆರಡು, ಮೊದಲನೇ ವರುಷದ ಕುರಿಮರಿಗಳು ಹನ್ನೆರಡು, ಅವುಗಳೊಂದಿಗೆ ಆಹಾರ ಸಮರ್ಪಣೆ; ಮತ್ತು ಪಾಪದ ಬಲಿಗಾಗಿ ಆಡುಮರಿಗಳು ಹನ್ನೆ ರಡು,
Kannada BSI JV (ಕನ್ನಡ ಸತ್ಯವೇದವು J.V. (BSI))
ಸರ್ವಾಂಗಹೋಮಕ್ಕಾಗಿ ಕೊಟ್ಟ ಪಶುಗಳು - ಹೋರಿಗಳು 12, ಟಗರುಗಳು 12, ವರುಷದ ಕುರಿಗಳು 12; ಇವುಗಳೊಂದಿಗೆ ಸಮರ್ಪಿಸಬೇಕಾದ ಧಾನ್ಯದ್ರವ್ಯವನ್ನೂ ಕೊಟ್ಟರು. ದೋಷಪರಿಹಾರಕಯಜ್ಞಕ್ಕಾಗಿ ಕೊಟ್ಟದ್ದು 12 ಹೋತಗಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ದಹನಬಲಿಗಾಗಿ ಇರುವ ಒಟ್ಟು ಪಶುಗಳು: 12 ಹೋರಿಗಳು, 12 ಟಗರುಗಳು, ಒಂದು ವರ್ಷದ ಕುರಿಮರಿಗಳು 12, ಅವುಗಳೊಂದಿಗೆ ಧಾನ್ಯ ಸಮರ್ಪಣೆ. ದೋಷಪರಿಹಾರಕ ಬಲಿಗಾಗಿ 12 ಹೋತಗಳು,