Numbers 8:2 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ಆರೋನನು ಪವಿತ್ರಗುಡಾರದಲ್ಲಿ ದೀಪಸ್ತಂಭದ ಮೇಲಿನ ದೀಪಗಳನ್ನು ಕ್ರಮಪಡಿಸಲು ಹೇಳು. ಆಗ ದೀಪಸ್ತಂಭದ ಮುಂದಿನ ಸ್ಥಳದಲ್ಲಿ ಬೆಳಕು ಪ್ರಕಾಶಿಸುವುದು” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ಆರೋನನು ದೇವಸ್ಥಾನದ ದೀಪಗಳನ್ನು ಕ್ರಮಪಡಿಸುವಾಗ ಆ ಏಳು ದೀಪಗಳು ದೀಪಸ್ತಂಭದ ಎದುರಾಗಿರುವ ಸ್ಥಳಕ್ಕೆ ಬೆಳಕುಕೊಡುವಂತೆ ಅವುಗಳನ್ನು ಇಡಬೇಕೆಂದು ಅವನಿಗೆ ಆಜ್ಞಾಪಿಸು” ಎಂದು ಹೇಳಿದನು.
Kannada BSI Bible 2016
ಆರೋನನ ಸಂಗಡ ಮಾತನಾಡಿ ಅವನಿಗೆ ಹೇಳಬೇಕಾದದ್ದೇನಂದರೆ-- ನೀನು ದೀಪಗಳನ್ನು ಹಚ್ಚುವಾಗ ದೀಪಸ್ತಂಭಕ್ಕೆದುರಾಗಿ ಆ ಏಳು ದೀಪಗಳು ಪ್ರಕಾಶಿಸಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆರೋನನು ದೇವಸ್ಥಾನದ ದೀಪಗಳನ್ನು ಕ್ರಮಪಡಿಸುವಾಗ ಆ ಏಳು ದೀಪಗಳು ದೀಪಸ್ತಂಭದ ಎದುರಾಗಿರುವ ಸ್ಥಳಕ್ಕೆ ಬೆಳಕುಕೊಡುವಂತೆ ಅವುಗಳನ್ನು ಇಡಬೇಕೆಂದು ಅವನಿಗೆ ಆಜ್ಞಾಪಿಸು ಎಂದು ಹೇಳಿದನು.
Kannada Bible (KNCL) BSI 2016
“ಆರೋನನು ದೇವಸ್ಥಾನದ ದೀಪಗಳನ್ನು ಹಚ್ಚುವಾಗ ಆ ಏಳು ದೀಪಗಳು ದೀಪಸ್ತಂಭದ ಎದುರಿಗಿರುವ ಸ್ಥಳಕ್ಕೆ ಬೆಳಕು ಕೊಡುವಂತೆ ನೋಡಿಕೊಳ್ಳಬೇಕೆಂದು ಅವನಿಗೆ ಆಜ್ಞಾಪಿಸು” ಎಂದು ಹೇಳಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಆರೋನನ ಸಂಗಡ ಮಾತನಾಡಿ ಅವನಿಗೆ ಹೀಗೆ ಹೇಳಬೇಕು, ‘ನೀನು ದೀಪಗಳನ್ನು ಹಚ್ಚುವಾಗ ಆ ಏಳು ದೀಪಗಳೂ ದೀಪಸ್ತಂಭದ ಎದುರಿಗಿರುವ ಸ್ಥಳಕ್ಕೆ ಪ್ರಕಾಶಕೊಡುವಂತೆ ನೋಡಿಕೊಳ್ಳಬೇಕು’ ಎಂದು ಹೇಳಿದರು.”