Numbers 8:25 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅವರ ವಯಸ್ಸು ಐವತ್ತು ವರ್ಷವಾದ ನಂತರ ಸೇವೆಯಿಂದ ನಿವೃತ್ತರಾಗಬೇಕು; ಪವಿತ್ರ ಗುಡಾರವನ್ನು ವರ್ಗಾವಣೆ ಮಾಡುವ ಭಾರವಾದ ಕೆಲಸವನ್ನು ಅವರೆಂದಿಗೂ ಮಾಡಕೂಡದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರು ಐವತ್ತು ವರ್ಷದವರಾದ ನಂತರ ಆ ಮಂಡಳಿಯನ್ನು ಬಿಟ್ಟು ದೇವಾಲಯದ ಸೇವಾಕಾರ್ಯದಿಂದ ಬಿಡುಗಡೆಯಾಗುವರು.
Kannada BSI Bible 2016
ಆದರೆ ಐವತ್ತು ವರುಷದವ ರಾಗಿ ಸೇವೆಯನ್ನು ಬಿಟ್ಟುಬಿಟ್ಟವರು ಇನ್ನು ಮೇಲೆ ಸೇವೆಮಾಡಬಾರದು.ಆದರೆ ಅವರು ಸಭೆಯ ಗುಡಾರದಲ್ಲಿ ಅಪ್ಪಣೆಯನ್ನು ಕೈಕೊಂಡು ತಮ್ಮ ಸಹೋದರರೊಂದಿಗೆ ಕೆಲಸ ಮಾಡಲಿ; ಸೇವೆಯನ್ನು ಮಾತ್ರ ಮಾಡಬಾರದು. ಈ ಪ್ರಕಾರ ನೀನು ಲೇವಿಯ ರಿಗೆ ಕಾಪಾಡಬೇಕಾದವುಗಳ ವಿಷಯದಲ್ಲಿ ಹೀಗೆ ಅವರಿಗೆ ನೇಮಿಸಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರು ಐವತ್ತು ವರುಷದವರಾದನಂತರ ಆ ಮಂಡಲಿಯನ್ನು ಬಿಟ್ಟು ದೇವಸ್ಥಾನದ ಪರಿಚರ್ಯದಿಂದ ಬಿಡುಗಡೆಯಾಗುವರು.
Kannada Bible (KNCL) BSI 2016
ಅವರು ಐವತ್ತು ವರ್ಷದವರಾದ ನಂತರ ಆ ಸೇವಾ ಸಂಸ್ಥೆಯನ್ನು ಬಿಟ್ಟು ದೇವಸ್ಥಾನದ ಪರಿಚರ್ಯದಿಂದ ನಿವೃತ್ತರಾಗಬೇಕು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಐವತ್ತು ವರ್ಷದವರಾದ ನಂತರ ಸೇವೆಯನ್ನು ಬಿಟ್ಟು ನಿವೃತ್ತರಾಗಬೇಕು ಮತ್ತು ತದನಂತರ ಕೆಲಸಮಾಡಬಾರದು.